ನವದೆಹಲಿ: ಈ ವರ್ಷದ ಆರಂಭದಿಂದಲೇ ಪಶ್ಚಿಮಬಂಗಾಳ ಸರ್ಕಾರ ಅಮಿತ್ ಶಾ ರ‍್ಯಾಲಿಗೆ ಅನುಮತಿ ನಿರಾಕರಿಸಿತ್ತು. ಆಗ ಈ ಸುದ್ಧಿ ಭಾರಿ ಸದ್ದು ಮಾಡಿತ್ತಲ್ಲದೇ, ಹೈಕೋರ್ಟ್,ಸುಪ್ರೀಂಕೋರ್ಟ್ ಮೆಟ್ಟಿಲು ಸಹ ಏರಿತ್ತು. ಈಗ ಮತ್ತೆ ಜಾದವ್ಪುರ ಜಿಲ್ಲಾಡಳಿತ ಅಮಿತ್ ಶಾ ರ‍್ಯಾಲಿಗೆ ಮತ್ತೆ ಅನುಮತಿ ನಿರಾಕರಿಸಿದೆ.
ಮತ್ತೆ ಅಮಿತ್ ಶಾ ರೋಡ್ ರ‍್ಯಾಲಿಗೆ ತಡೆ.... ಹೆಲಿಕಾಪ್ಟರ್ ಲ್ಯಾಂಡಿಂಗ್ಗೂ ಇಲ್ಲ ಅವಕಾಶ - ಅನುಮತಿ
ವಿಶೇಷ ಎಂದರೆ ಇದು ಮೊದಲ ಬಾರಿಯೇನೂ ಅಲ್ಲ. ಕಳೆದ ಜನವರಿಯಲ್ಲಿ ಮಾಲ್ಡಾ ಜಿಲ್ಲಾಡಳಿತ ಅಮಿತ್ ಶಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಅನುಮತಿ ನಿರಾಕರಿಸಿತ್ತು.
ಅಮಿತ್ ಶಾ
ಇನ್ನು ಇನ್ನು ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಅಲ್ಲಿನ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಈ ವಿಷಯ ಮತ್ತೆ ಸದ್ದು ಮಾಡಿದೆ. ವಿಶೇಷ ಎಂದರೆ ಇದು ಮೊದಲ ಬಾರಿಯೇನೂ ಅಲ್ಲ. ಕಳೆದ ಜನವರಿಯಲ್ಲಿ ಮಾಲ್ಡಾ ಜಿಲ್ಲಾಡಳಿತ ಅಮಿತ್ ಶಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಅನುಮತಿ ನಿರಾಕರಿಸಿತ್ತು.
ಅಷ್ಟೇ ಅಲ್ಲ ಫೆಬ್ರವರಿಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಹೆಲಿಕಾಪ್ಟರ್ ಇಳಿಯಲು ಅನುಮತಿ ಕೊಟ್ಟಿರಲಿಲ್ಲ.