ನವದೆಹಲಿ: ಎಲ್ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಆಯೋಜನೆ ಮಾಡಿದ್ದ ಇಫ್ತಾರ್ ಪಾರ್ಟಿಯ ಕುರಿತಾಗಿ ಬೇಗುಸರಾಯ್ ಕ್ಷೇತ್ರದ ಸಂಸದ ಗಿರಿರಾಜ್ ಸಿಂಗ್ ಮಾಡಿರುವ ಟ್ವೀಟ್ಗೆ ನೂತನ ಗೃಹ ಸಚಿವ ಅಮಿತ್ ಶಾ ಗರಂ ಆಗಿದ್ದಾರೆ.
ನಮ್ಮ ಧಾರ್ಮಿಕ ಆಚರಣೆಗಳನ್ನು ಸೂಕ್ತವಾಗಿ ಮಾಡದೆ ತೋರ್ಪಡಿಕೆಗೆ ಬೇರೆ ಧರ್ಮೀಯರ ಹಬ್ಬವನ್ನು ಆಚರಿಸುವ ಅಗತ್ಯವಿದೆಯೇ ಎನ್ನುವ ಅರ್ಥದಲ್ಲಿ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದರು.