ನವದೆಹಲಿ: ಡೆಲ್ಲಿ ಕ್ಯಾಪಿಟಲ್ ತಂಡದ ಸ್ಪಿನ್ ಬೌಲರ್ ಅಮಿತ್ ಮಿಶ್ರಾ ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ ಎರಡನೇ ಹಾಗೂ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂದು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಮುಂಬೈ ನಾಯಕ ರೋಹಿತ್ ಶರ್ಮಾರನ್ನು ಬೌಲ್ಡ್ ಮಾಡುವ ಮೂಲಕ ಮಿಶ್ರಾ ತಮ್ಮ 150 ನೇ ವಿಕೆಟ್ ಪಡೆದರು.
ಮಿಶ್ರಾಗೂ ಮೊದಲು ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಲಿಂಗಾ ಈ ಸಾಧನೆ ಮಾಡಿದ್ದರು. ಮಲಿಂಗಾ 115 ಪಂದ್ಯಗಳಿಂದ 161 ವಿಕೆಟ್ ಪಡೆದಿದ್ದಾರೆ. ಪಿಯುಷ್ ಚಾವ್ಲಾ 152 ಪಂದ್ಯಗಳಿಂದ 146 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿ, ಬ್ರಾವೋ 126 ಪಂದ್ಯಗಳಿಂದ 143, ಹರಭಜನ್ 151 ಪಂದ್ಯಗಳಿಂದ 141 ವಿಕೆಟ್ ಪಡೆದಿದ್ದಾರೆ.
ವಯಸ್ಸು 36 ಆದರೂ ತಮ್ಮ ಬೌಲಿಂಗ್ ಕೈಚಕಕ್ಕೆ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಗೊಂದಲಕ್ಕೊಳಗಾಗುವಂತೆ ಮಾಡುವ ಮಿಶ್ರಾ 150 ವಿಕೆಟ್ ಪಡೆದಿರುವ ಭಾರತದ ಏಕೈಕ ಬೌಲರ್ ಎಂಬ ಎನಿಸಿದ್ದಾರೆ.
ಇದಲ್ಲದೆ ಮಿಶ್ರಾ ಐಪಿಎಲ್ನಲ್ಲಿ 3 ಬಾರಿ ಹ್ಯಾಟ್ರಿಕ್ ಪಡೆದಿರುವ ಏಕೈಕ ಬೌಲರ್ ಆಗಿದ್ದಾರೆ.