ಕರ್ನಾಟಕ

karnataka

ETV Bharat / briefs

ವಯನಾಡಲ್ಲಿ ರಾಹುಲ್ ರೋಡ್​ಶೋ, ಕ್ಷೇತ್ರದ ಅಭಿವೃದ್ಧಿಗೆ ಕಟಿಬದ್ಧ ಎಂದ ನೂತನ ಸಂಸದ - ಎಐಸಿಸಿ ಅಧ್ಯಕ್ಷ

ವಯನಾಡು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯದ ಲೋಕಸಭೆ ಚುನಾವಣೆಯ ಇತಿಹಾಸದಲ್ಲೇ ದಾಖಲೆ ಮತಗಳ ಅಂತರ(4 ಲಕ್ಷದ 31 ಸಾವಿರ)ದಿಂದ ಗೆಲುವು ಸಾಧಿಸಿದ್ದರು.

ರಾಗಾ

By

Published : Jun 7, 2019, 10:13 PM IST

ವಯನಾಡು(ಕೇರಳ):ಲೋಕಸಭಾ ಚುನಾವಣೆಯಲ್ಲಿ ರಕ್ಷಣಾತ್ಮಕ ನಡೆಯ ಮೂಲಕ ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದರು.

ತಮ್ಮನ್ನು ಭರ್ಜರಿಯಾಗಿ ಗೆಲ್ಲಿಸಿಕೊಟ್ಟ ವಯನಾಡು ಕ್ಷೇತ್ರಕ್ಕೆ ಆಗಮಿಸಿದ ರಾಹುಲ್ ಭರ್ಜರಿ ರೋಡ್‌ ಶೋ ನಡೆಸಿ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ವೇಳೆ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ಕಂಡುಬಂತು.

ತೆರೆದ ವಾಹನದಲ್ಲಿ ರೋಡ್​ಶೋ ನಡೆಸಿದ ರಾಹುಲ್,​​ ಸೇರಿದ್ದ ಜನತೆಯತ್ತ ಕೈಬೀಸಿ ಗೆಲುವಿನ ಖುಷಿ ತೋರ್ಪಡಿಸಿದರು. ರಸ್ತೆಯ ಇಕ್ಕೆಲೆಗಳಲ್ಲಿ ಸೇರಿದ್ದ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಗಂಟೆಗಳ ರಾಹುಲ್, ರಾಹುಲ್ ಎನ್ನುವ ಘೋಷನೆ ಕೂಗಿದರು.

ವಯನಾಡು ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಹೋರಾಡುತ್ತೇನೆ. ಕ್ಷೇತ್ರದ ಎಲ್ಲ ಸಮಸ್ಯೆಯನ್ನು ಸಂಸತ್ತಿನ ಒಳಗೂ,ಹೊರಗೂ ಚರ್ಚೆಗೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ದೂರು-ದುಮ್ಮಾನಗಳಿಗೆ ನಾನು ಕಿವಿಯಾಗುತ್ತೇನ ಎನ್ನುವ ಭರವಸೆಯನ್ನು ರಾಹುಲ್ ಗಾಂಧಿ ನೀಡಿದ್ದಾರೆ.

ABOUT THE AUTHOR

...view details