ಕರ್ನಾಟಕ

karnataka

ETV Bharat / briefs

ರಾಜೀವ್ ಗಾಂಧಿ ವಿರುದ್ಧ ಮೋದಿ ಮಾತನಾಡುವುದು ನಿಲ್ಲಿಸಲಿ... ರಕ್ತದಲ್ಲಿ ಪತ್ರ ಬರೆದ ಅಮೇಠಿ ನಿವಾಸಿ - ಚುನಾವಣಾ ಆಯೋಗ

ಪ್ರಧಾನಿ ಮೋದಿ, ರಾಜೀವ್ ಗಾಂಧಿ ಹೆಸರನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಯೋಗಕ್ಕೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪತ್ರ

By

Published : May 9, 2019, 5:29 PM IST

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರು ಚುನಾವಣೆ ವೇಳೆ ದುರ್ಬಳಕೆಯಾಗುತ್ತಿರುವುದನ್ನು ಖಂಡಿಸಿ ಅಮೇಠಿಯ ಶಾಗಢ ನಿವಾಸಿ ಮನೋಜ್ ಕಶ್ಯಪ್ ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಪ್ರಧಾನಿ ಮೋದಿ, ರಾಜೀವ್ ಗಾಂಧಿ ಹೆಸರನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಯೋಗಕ್ಕೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಹೆಚ್ಚಿನ ಓದಿಗಾಗಿ:

ಐಎನ್​ಎಸ್​​ ವಿರಾಟ್​​ ಪ್ರಧಾನಿ​ ಭದ್ರತೆಗಾಗಿ ನಿಯೋಜನೆಯಾಗಿತ್ತು: ಮೋದಿ ಆರೋಪಕ್ಕೆ ಮಾಜಿ ಅಧಿಕಾರಿ ಸ್ಪಷ್ಟನೆ

ರಾಜೀವ್ ಗಾಂಧಿಯ ವಿರುದ್ಧದ ಪದ ಬಳಕೆ ಮಾಡುವ ಮೂಲಕ ಅಮೇಠಿಯ ಶ್ರೀಸಾಮಾನ್ಯರ ಭಾವನೆಗಳಿಗೆ ಮೋದಿ ಧಕ್ಕೆ ತರುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜೀವ್ ಗಾಂಧಿ ಅಮೇಠಿಯ ಪ್ರತಿಯೊಬ್ಬರ ಹೃದಯದಲ್ಲೂ ನೆಲೆಸಿದ್ದಾರೆ. ಇಲ್ಲಿನ ಜನರಿಗಾಗಿ ಹೋರಾಟ ನಡೆಸಿ ಪ್ರಾಣವನ್ನೇ ಅರ್ಪಿಸಿದರು ಎಂದು ಮನೋಜ್​ ಕಶ್ಯಪ್ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ABOUT THE AUTHOR

...view details