ಓವಲ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ರೋಮಾಂಚನಕಾರಿ ಕ್ಯಾಚ್ ಮೂಲಕ ಕ್ರೀಡಾಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ನಿನ್ನೆ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಮಾತ್ರವಲ್ಲ ಫೀಲ್ಡಿಂಗ್‌ನಲ್ಲೂ ಮಿಂಚಿದ್ರು.
ಆದಿಲ್ ರಶೀದ್ ಎಸೆತವನ್ನು ಸಿಕ್ಸರಿಗಟ್ಟಲು ಮುಂದಾದ ದಕ್ಷಿಣ ಆಫ್ರಿಕಾದ ಆ್ಯಂಡಿಲೆ ಪೆಹ್ಲುಕ್ವಾಯೊ ಹೊಡೆತ ನೇರವಾಗಿ ಬೆನ್ ಸ್ಟೋಕ್ಸ್ ಕೈಯಲ್ಲಿ ಬಂದಿಯಾಯ್ತು. ಇಷ್ಟಕ್ಕೂ ಅದೇನೂ ಸುಲಭದ ಕ್ಯಾಚ್ ಆಗಿರಲಿಲ್ಲ. ಬೆನ್ ಸ್ಟೋಕ್ಸ್ ವಿಶಿಷ್ಟವಾಗಿ ಕ್ಯಾಚ್ ಹಿಡಿದಿದ್ದು ವೀಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ.
ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಆತಿಥೇಯ ಇಂಗ್ಲೆಂಡ್ ಮೊದಲ ಭರ್ಜರಿ ಜಯ ದಾಖಲಿಸಿದೆ.