ಕರ್ನಾಟಕ

karnataka

ETV Bharat / briefs

ಚಾಮರಾಜನಗರದಲ್ಲಿ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಎಲ್ಲ ವ್ಯಾಪಾರ ಚಟುವಟಿಕೆ ಬಂದ್..! - ಚಾಮರಾಜನಗರದಲ್ಲಿ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಎಲ್ಲಾ ವ್ಯಾಪಾರ ಚಟುವಟಿಕೆ ಬಂದ್

ಇಂದು ಪೊಲೀಸರು ಸಿಟಿ ರೌಂಡ್ಸ್ ಹಾಕಿ ತೆರೆದಿದ್ದ ಎಲೆಕ್ಟ್ರಾನಿಕ್ ಮಳಿಗೆಗಳು, ಬಟ್ಟೆ ಅಂಗಡಿಗಳು, ಪ್ಲಾಸ್ಟಿಕ್ ಆಟಿಕೆಗಳ ಅಂಗಡಿ, ಆಭರಣ ಮಳಿಗೆ, ಪಾತ್ರೆ ಅಂಗಡಿಗಳನ್ನು ಮುಚ್ಚಿಸಿದರು.

Chamarajanagara
Chamarajanagara

By

Published : Apr 22, 2021, 7:35 PM IST

ಚಾಮರಾಜನಗರ:ದಿನಸಿ ಅಂಗಡಿ, ಮೆಡಿಕಲ್ ಸ್ಟೋರ್, ಹಣ್ಣು, ಮಾಂಸದಂಗಡಿ ಬಿಟ್ಟು ಉಳಿದೆಲ್ಲ ವ್ಯಾಪಾರ ಚಟುವಟಿಕೆಗಳನ್ನು ನಗರ ಪೊಲೀಸರು ಬಂದ್ ಮಾಡಿಸಿದರು.

ಇಂದು ಪೊಲೀಸರು ಸಿಟಿ ರೌಂಡ್ಸ್ ಹಾಕಿ ತೆರೆದಿದ್ದ ಎಲೆಕ್ಟ್ರಾನಿಕ್ ಮಳಿಗೆಗಳು, ಬಟ್ಟೆ ಅಂಗಡಿಗಳು, ಪ್ಲಾಸ್ಟಿಕ್ ಆಟಿಕೆಗಳ ಅಂಗಡಿ, ಆಭರಣ ಮಳಿಗೆ, ಪಾತ್ರೆ ಅಂಗಡಿಗಳನ್ನು ಮುಚ್ಚಿಸಿದರು. ಹೋಟೆಲ್​ಗಳಲ್ಲಿ ಪಾರ್ಸೆಲ್​ಗಷ್ಟೇ ಅವಕಾಶ ನೀಡಲಾಗಿದೆ. ಸೇವೆ ಏನಾದರೂ ಕೊಟ್ಟರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾವುದು ಎಂದು ಸೂಚಿಸಿದರು.

ಕೊರೊನಾ ಮೊದಲನೇ ಅಲೆ ಮಾಯವಾಗಿ ಚೇತರಿಕೆ ಕಾಣುತ್ತಿದ್ದ ಆರ್ಥಿಕ ಚಟುವಟಿಕೆ ಎರಡನೇ ಅಲೆಯ ಹೊಡೆತಕ್ಕೆ ಮತ್ತೆ ಬೋರಲು ಬಿದ್ದಿದೆ‌.‌ ಸಣ್ಣ ಮಳಿಗೆದಾರರು, ಹೋಟೆಲ್ ಉದ್ಯಮ ನೆಲ ಕಚ್ಚಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿದ್ದಾರೆ.

For All Latest Updates

ABOUT THE AUTHOR

...view details