ಕರ್ನಾಟಕ

karnataka

ETV Bharat / briefs

ಯುವತಿ ಮೇಲೆ ಅತ್ಯಾಚಾರ.. ಇಂಗ್ಲೆಂಡ್​ ಕ್ರಿಕೆಟರ್​ಗೆ ಐದು ವರ್ಷ ಜೈಲು! - ಯುವತಿ ಮೇಲೆ ಅತ್ಯಚಾರ

23 ವರ್ಷದ ಆಸ್ಟ್ರೇಲಿಯಾ ಮೂಲದ ಅಲೆಕ್ಸ್ ಹೆಪ್​ಬರ್ನ್ ಮಲಗಿದ್ದ ಯುವತಿವೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಅಲೆಕ್ಸ್​​ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇಂಗ್ಲೆಂಡ್​

By

Published : Apr 30, 2019, 10:59 PM IST

ನವದೆಹಲಿ: ಇಂಗ್ಲೆಂಡ್​ನ ವಾರ್ಸೆಸ್ಟ್​ರ್ಶೈರ್ ಕ್ಲಬ್​ನ ಮಾಜಿ ಕ್ರಿಕೆಟಿಗನೊಬ್ಬನಿಗೆ ಅತ್ಯಾಚಾರ ಪ್ರಕರಣದಡಿ 5 ವರ್ಷಗಳ ಜೈಲುಶಿಕ್ಷೆಯಾಗಿದೆ.

23 ವರ್ಷದ ಆಸ್ಟ್ರೇಲಿಯಾ ಮೂಲದ ಅಲೆಕ್ಸ್ ಹೆಪ್​ಬರ್ನ್ ಮಲಗಿದ್ದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಏಪ್ರಿಲ್ 1, 2017ನಡೆದಿದ್ದಪ್ರಕರಣ :

ಅತ್ಯಾಚಾರಕ್ಕೊಳಗಾಗಿರುವ ಯುವತಿ ಘಟನೆ ನಡೆಯುವುದಕ್ಕಿಂತ ಮುನ್ನ ಇಂಗ್ಲೆಂಡ್​ ಕ್ರಿಕೆಟಿಗ ಜೋ ಕ್ಲಾರ್ಕ್​ರೊಡನೆ ಒಮ್ಮತದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳಂತೆ. ಕ್ಲಾರ್ಕ್​ ಆ ರೂಮಿನಿಂದ ಹೊರಟ ನಂತರ ಯುವತಿ ಅದೇ ಕೋಣೆಯಲ್ಲಿ ವಿಶ್ರಾಂತಿಯಲ್ಲಿದ್ದಳು. ಆ ಸಂದರ್ಭದಲ್ಲಿ ತುಂಬಾ ಕುಡಿದಿದ್ದ ಅಲೆಕ್ಸ್ ರೂಮಿಗೆ ಬಂದಿದ್ದಾನೆ.

ಆದರೆ, ಆ ಯುವತಿ ಈತನನ್ನು ಕ್ಲಾರ್ಕ್​ ಎಂದು ಭಾವಿಸಿ ನಿದ್ರೆಯಿಂದ ಏಳದೆ ಮಲಗಿದ್ದಾಳೆ. ಈ ವೇಳೆ ಅಲೆಕ್ಸ್​ ಯುವತಿಯ ಮೇಲೆರಗಿದ್ದಾನೆ. ಆ ಯುವತಿ ಕ್ಲಾರ್ಕ್​ ಇರಬಹುದೆಂದು ಪ್ರತಿರೋಧ ತೋರಿಲ್ಲ. ಆದರೆ, 20 ನಿಮಿಷಗಳ ನಂತರ ಧ್ವನಿಯಲ್ಲಿ ಆತ ಕ್ಲಾರ್ಕ್​ ಅಲ್ಲ ಅಲೆಕ್ಸ್​ ಎಂದು ತಿಳಿಯಿತು ಎಂದು ಕೋರ್ಟ್​ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ತಿಳಿಸಿದ್ದಾಳೆ.

ಯುವತಿಯ ಹೇಳಿಕೆಯನ್ನಾಧರಿಸಿ ಕೋರ್ಟ್​ ಅಲೆಕ್ಸ್​ನನ್ನು ಆರೋಪಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ABOUT THE AUTHOR

...view details