ಲಂಡನ್:ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಅಲೆಕ್ಸ್ ಹೇಲ್ಸ್ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ವಿಶ್ವಕಪ್ ತಂಡದಿಂದ ಹೊರ ಹಾಕಿದೆ.
ಅಲೆಕ್ಸ್ ಹೇಲ್ಸ್ ಕಳೆದ ವಾರವಷ್ಟೇ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ 21 ದಿನಗಳ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿಷೇಧಕ್ಕೆ ಒಳಗಾಗಿದ್ದರು. ಆದರೆ ವಿಶ್ವಕಪ್ಗೂ ಮುನ್ನ ತಂಡ ಸೇರಿಕೊಳ್ಳಬಹುದೆಂದು ಭಾವಿಸಲಾಗಿತ್ತು. ಆದರೆ, ಇಸಿಬಿ ಇಂದು ವಿಶ್ವಕಪ್ ತಂಡದಿಂದಲೂ ಹೇಲ್ಸ್ರನ್ನು ಹೊರ ಹಾಕಿರುವುದಾಗಿ ತಿಳಿಸಿದೆ
ಹೇಲ್ಸ್ರನ್ನು ತಂಡದಿಂದ ಹೊರ ಹಾಕಿರುವ ಕುರಿತು ಪ್ರತಿಕ್ರಿಯಿಸಿರುವ ಇಸಿಬಿ ನಿರ್ದೇಶಕ ಆ್ಯಶ್ಲೆ ಗಿಲ್ಸ್ 'ನಾವು ತಂಡದಲ್ಲಿ ಉತ್ತಮವಾದ ಪರಿಸರ ನಿರ್ಮಿಸಲು ಪ್ರಯತ್ನ ನಡೆಸುತ್ತಿದ್ದು, ಅನಗತ್ಯವಾದ ಗೊಂದಲಕ್ಕೆ ಆಸ್ಪದ ಕೊಡಬಾರದೆಂಬ ಉದ್ದೇಶ ಹಾಗೂ ಇಂತಹ ಘಟನೆಗಳ ಮುಂದೆಂದೂ ಸಂಭವಿಸಬಾರದೆಂದು ಹೇಲ್ಸ್ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.