ಕರ್ನಾಟಕ

karnataka

ETV Bharat / briefs

ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಫೇಲ್​.. ಆಂಗ್ಲ ಕ್ರಿಕೆಟರ್‌ಗೆ 21 ದಿನ ನಿಷೇಧ ಹೇರಿದ ಇಸಿಬಿ - ವಿಶ್ವಕಪ್​ ತಂಡ

ಇಂಗ್ಲೆಂಡ್​ ತಂಡ ಘೋಷಿಸಿರುವ 15 ಆಟಗಾರರ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರುವ ಅಲೆಕ್ಸ್​ ಹೇಲ್ಸ್​ ಇದೀಗ 2ನೇ ಬಾರಿ ಡ್ರಗ್​ ಟೆಸ್ಟ್​ನಲ್ಲಿ ಅನುತ್ತೀರ್ಣರಾದ ಹಿನ್ನಲೆಯಲ್ಲಿ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ 3 ವಾರಗಳ ಕಾಲ ಕ್ರಿಕೆಟ್​ನಿಂದ ನಿಷೇಧ ಹೇರಿದೆ.

ecb

By

Published : Apr 27, 2019, 10:28 AM IST

ಲಂಡನ್​ : ಇಂಗ್ಲೆಂಡ್​ ತಂಡದ ಆರಂಭಿಕ ಆಟಗಾರ ಅಲೆಕ್ಸ್​ ಹೇಲ್ಸ್​ರನ್ನು​ ಉದ್ದೀಪನ ಮದ್ದು(ಮಾಧಕ ದ್ರವ್ಯ) ಸೇವಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 21 ದಿನಗಳವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧಿಸಲಾಗಿದೆ.

ಇಂಗ್ಲೆಂಡ್​ ತಂಡ ಘೋಷಿಸಿರುವ 15 ಆಟಗಾರರ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರುವ ಅಲೆಕ್ಸ್​ ಹೇಲ್ಸ್​ ಇದೀಗ ಎರಡನೇ ಬಾರಿ ಡ್ರಗ್​ ಟೆಸ್ಟ್​ನಲ್ಲಿ ಅನುತ್ತೀರ್ಣರಾದ ಹಿನ್ನಲೆಯಲ್ಲಿ ಅವರಿಗೆ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ 3 ವಾರಗಳ ಕಾಲ ಕ್ರಿಕೆಟ್​ನಿಂದ ನಿಷೇಧ ಹೇರಿದೆ.

ಇಂಗ್ಲೆಂಡ್​ ಕ್ರಿಕೆಟ್​ ನಿಯಮದ ಪ್ರಕಾರ ಮೊದಲ ಬಾರಿಗೆ ಡ್ರಗ್​ ಟೆಸ್ಟ್​ನಲ್ಲಿ ಫೇಲ್​ ಆದವರಿಗೆ ಇಸಿಬಿ ಹಾಗೂ ಕ್ರಿಕೆಟರ್ಸ್​ ಅಸೋಸಿಯೇಷನ್​ ಒಳಗೆ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುತ್ತದೆ. 2 ನೇ ಬಾರಿ ಫೇಲ್​ ಆದರೆ, 3 ವಾರಗಳ ಕಾಲ ಎಲ್ಲಾ ವಿಭಾಗದ ಕ್ರಿಕೆಟ್​ನಿಂದ ಬ್ಯಾನ್​ ಮಾಡಲಾಗುತ್ತದೆ. ಒಂದು ವೇಳೆ ಅದೇ ಆಟಗಾರ ಮೂರನೇ ಬಾರಿ ಡ್ರಗ್​ ಟೆಸ್ಟ್​ನಲ್ಲಿ ಫೇಲ್​ ಆದಲ್ಲಿ ಆತನ ಜತೆಗಿನ ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ ಒಪ್ಪಂದವನ್ನು ತಕ್ಷಣವೇ ನಿಲ್ಲಿಸಬಹುದು ಎಂದು ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ತಿಳಿಸಿದೆ.

ಕೆಲವು ತಿಂಗಳ ಹಿಂದೆಯಷ್ಟೇ ಪಬ್​ವೊಂದರಲ್ಲಿ ಗಲಾಟೆ ಮಾಡಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದ ಬೆನ್​ ಸ್ಟೋಕ್ಸ್​ಗೆ 6 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿಷೇಧ ಹೇರಲಾಗಿತ್ತು. ಆ ಸಮಯದಲ್ಲೂ ಹೇಲ್ಸ್​ ಸ್ಟೋಕ್ಸ್​ ​ಜೊತೆ ಕಾಣಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಸ್ಟೋಕ್ಸ್​ರನ್ನು ಪೊಲೀಸರು ಬಂಧಿಸಿದ್ದರು. ಜೊತೆಗೆ ಅವರಿಗೆ ಇಸಿಬಿ 17500 ಪೌಂಡ್ಸ್​ ದಂಡವಿಧಿಸಿತ್ತು. ಹೇಲ್ಸ್​ ಇಂಗ್ಲೆಂಡ್​ ಪರ 69 ಏಕದಿನ ಪಂದ್ಯಗಳಲ್ಲಿ 2419 ರನ್​ಗಳಿಸಿದ್ದಾರೆ. 6 ಶತಕ ಹಾಗೂ 14 ಅರ್ಧಶತಕ ಕೂಡ ಸೇರಿವೆ.

ABOUT THE AUTHOR

...view details