ಕರ್ನಾಟಕ

karnataka

ETV Bharat / briefs

ಟೊಮೇಟೊ ಕ್ರೇಟ್​ ಜೊತೆ ಮದ್ಯ ಸಾಗಣೆ: ಗುಂಡ್ಲುಪೇಟೆಯಲ್ಲಿ ಖದೀಮ ಅಂದರ್ - ಗುಂಡ್ಲುಪೇಟೆ ಇತ್ತೀಚಿನ ಸುದ್ದಿ

ಟೊಮೇಟೊ ಕ್ರೇಟ್ ಜೊತೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಕೇರಳದ ಮೂಲದ ಗಫೂರ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಮದ್ಯ ಸಾಗಾಟ
ಅಕ್ರಮ ಮದ್ಯ ಸಾಗಾಟ

By

Published : Jun 1, 2021, 4:34 PM IST

ಚಾಮರಾಜನಗರ: ಟೊಮೇಟೊ ಕ್ರೇಟ್ ಜೊತೆ ಅಕ್ರಮವಾಗಿ ಮದ್ಯವನ್ನು ತಮಿಳುನಾಡಿನ ಗೂಡಲೂರಿಗೆ ಸಾಗಿಸುತ್ತಿದ್ದ ಖದೀಮನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಗಫೂರ್(37) ಬಂಧಿತ ಆರೋಪಿ. ತಮಿಳುನಾಡಿನಲ್ಲಿ ಕಠಿಣ ಲಾಕ್​ಡೌನ್ ಜಾರಿಯಲ್ಲಿದ್ದು, ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಅಕ್ರಮವಾಗಿ ತಮಿಳುನಾಡಿಗೆ ಮದ್ಯ ಸಾಗಣೆ ಮಾಡುತ್ತಿದ್ದ. ಇನ್ನು ಮದ್ಯವನ್ನು ಟೊಮೇಟೊ ಕ್ರೇಟ್​ ಜೊತೆ ಸೇರಿಸಿಕೊಂಡು ಸಾಗಿಸುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಗುಂಡ್ಲುಪೇಟೆ ಪೊಲೀಸರು ಸ್ವತ್ತು ಸಮೇತ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಈತನ ಬಳಿಯಿದ್ದ ವಿವಿಧ ಕಂಪನಿಯ 147 ಮದ್ಯದ ಬಾಟಲಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರ ಬೆಲೆ ಸುಮಾರು 45 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details