ನವದೆಹಲಿ:ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ವಾಯುದಾಳಿ ನಡೆಸಿದ ಬಳಿಕ ಏರ್ ಇಂಡಿಯಾಗೆ ₹300 ಕೋಟಿ ನಷ್ಟವಾಗಿದೆ ಎಂದು ವರದಿಯೊಂದು ಹೇಳಿದೆ.
ವಾಯುದಾಳಿ ನಡೆದ ಕೆಲ ಗಂಟೆಗಳಲ್ಲೇ ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಬಂದ್ ಮಾಡಿತ್ತು. ಇದು ಏರ್ ಇಂಡಿಯಾ ಮೇಲೆ ನೇರವಾಗಿ ಪರಿಣಾಮ ಬೀರಿದೆ.

ಪಾಕ್ ವಾಯುಮಾರ್ಗ ಬಂದ್ ಆದ ಕಾರಣ ಯುರೋಪ್, ಗಲ್ಫ್ ಹಾಗೂ ಅಮೆರಿಕಾ ದೇಶಗಳಿಗೆ ಬದಲಿ ಮಾರ್ಗ ಬಳಸಬೇಕಾದ ಅನಿವಾರ್ಯತೆ ಬಂದಿದೆ. ಪ್ರತಿನಿತ್ಯ 350 ವಿಮಾನಗಳು ಪಾಕ್ ನಿರ್ಧಾರದಿಂದ ತೊಂದರೆ ಅನುಭವಿಸಿವೆ ಎಂದು ವರದಿಯಾಗಿದೆ.
ಬದಲಿ ಮಾರ್ಗ ಅನುಸರಿಸಿದ ಪರಿಣಾಮ ಏರ್ ಇಂಡಿಯಾ ಕೇವಲ ಇಂಧನಕ್ಕಾಗಿಯೇ ಪ್ರತಿನಿತ್ಯ ಆರು ಕೋಟಿ ಹೆಚ್ಚಿನ ಹೊರೆ ಅನುಭವಿಸಿದೆ ಎನ್ನಲಾಗುತ್ತಿದೆ.