ಗಾಲಿಪೊಲಿ(ಆಸ್ಟ್ರೇಲಿಯಾ): ಮೇ 30ರಿಂದ ಐಸಿಸಿ ಏಕದಿನ ವಿಶ್ವಕಪ್ ಮಹಾಸಮರ ಆರಂಭಗೊಳ್ಳಲಿದೆ. ಅದಕ್ಕಾಗಿ ಎಲ್ಲ ತಂಡಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿದ್ದು, ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಕಣಕ್ಕಿಳಿಯಲಿವೆ.
ಇದರ ಮಧ್ಯೆ ಆಸ್ಟ್ರೇಲಿಯಾ ತಂಡ ವರ್ಲ್ಡ್ ವಾರ್ 1 ಮೆಮೊರಿಯಲ್ ಸ್ಮಾರಕಕ್ಕೆ ಭೇಟಿ ನೀಡಿ ಸ್ಫೂರ್ತಿ ಪಡೆದುಕೊಂಡರು. ಮೊದಲ ಮಹಾಯುದ್ಧ ನಡೆದ ಸಮಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ನ 11,000 ಯೋಧರು ಹುತಾತ್ಮರಾಗಿದ್ದರು. ಅದರ ಸ್ಮರಣಾರ್ಥವಾಗಿ ಈ ಮೆಮೊರಿಯಲ್ ನಿರ್ಮಾಣ ಮಾಡಲಾಗಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದೇ ರೀತಿ ಆಸ್ಟ್ರೇಲಿಯಾ ಕೂಡ ಈ ಸ್ಥಳಕ್ಕೆ ಭೇಟಿ ನೀಡಿದೆ.
ವಿಶ್ವಕಪ್ಗೂ ಮುನ್ನ ವರ್ಲ್ಡ್ ವಾರ್ ಮೆಮೊರಿಯಲ್ಗೆ ಭೇಟಿ... ಸ್ಪೂರ್ತಿ ಪಡೆದ ಕಾಂಗರೂ ಪಡೆ! - ಕಾಂಗರೂ ಪಡೆ
ವಿಶ್ವಕಪ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ವರ್ಲ್ಡ್ ವಾರ್ 1 ಮೆಮೊರಿಯಲ್ ಸ್ಮಾರಕಕ್ಕೆ ಭೇಟಿ ನೀಡಿ ಸ್ಫೂರ್ತಿ ಪಡೆದುಕೊಂಡರು.
ಆಸ್ಟ್ರೇಲಿಯಾ ಕ್ರಿಕೆಟ್ ತಂಡ
ಭೇಟಿ ನೀಡಿದ ಬಳಿಕ ಮಾತನಾಡಿದ ತಂಡದ ಉಪನಾಯಕ ಪ್ಯಾಟ್ ಕುಮ್ಮಿನ್ಸ್, ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದಿರುವ ಅವರು, ಮಾನಸಿಕವಾಗಿ ಧೈರ್ಯಗೊಳ್ಳಲು ಈ ಸ್ಥಳಕ್ಕೆ ಭೇಟಿ ನಿಡಿದ್ದೇವೆ ಎಂದು ಹೇಳಿದ್ದಾರೆ. ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡ ಈಗಾಗಲೇ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.