ಕರ್ನಾಟಕ

karnataka

ETV Bharat / briefs

ಬಿಜೆಪಿ ಟಾರ್ಗೆಟ್​ 300 ಸಕ್ಸಸ್​ ಆಗೋದು ಪಕ್ಕಾ: ಸುದ್ದಿಗೋಷ್ಠಿಯಲ್ಲಿ ಅಮಿತೋತ್ಸಾಹ - ದೇಶ ಸುರಕ್ಷಿತ

ಬಿಜೆಪಿ ಸುದ್ದಿಗೋಷ್ಠಿ

By

Published : May 17, 2019, 4:53 PM IST

Updated : May 17, 2019, 5:59 PM IST

2019-05-17 17:46:32

ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ನಮೋ ಭಾಗಿ

ಮೋದಿ ಮಾತು

ಭಾರತ ದೇಶದ ಚುನಾವಣಾ ಇತಿಹಾಸದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಐದು ವರ್ಷಗಳ ನಂತರ ಮತ್ತೆ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಯಾವ ಸರ್ಕಾರವೂ ಬಂದಿಲ್ಲ. ಈ ಸಲ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿ ಮೋದಿ ಹೇಳಿದರು. 

ಈ ಹಿಂದಿನ ಸರ್ಕಾರಗಳು ಚುನಾವಣೆ ಆರಂಭಗೊಂಡರೆ ಐಪಿಎಲ್​ ಪಂದ್ಯಾವಳಿಯನ್ನೇ ಭಾರತದಿಂದ ಬೇರೆ ದೇಶಕ್ಕೆ ಕಳಿಸಲಾಗಿತ್ತು. ಆದರೆ ಈಗ ಒಂದೆಡೆ ಐಪಿಎಲ್​, ಮಕ್ಕಳ ಪರೀಕ್ಷೆಗಳು, ವಿಧಾನಸಭಾ ಚುನಾವಣೆಗಳು, ಉಪ ಚುನಾವಣೆಗಳು ಸೇರಿದಂತೆ ಹಲವು ಚಟುವಟಿಕೆಗಳು ದೇಶದಲ್ಲಿ ಒಟ್ಟಿಗೇ ನಡೆಯುತ್ತಿವೆ. ಇದು ನಮ್ಮ ಸರ್ಕಾರದಿಂದ ಆಗಿದ್ದು ಎಂದು ನಾನು ಹೇಳುವುದಿಲ್ಲ. ಇದು ಭಾರತದ ದೇಶದ ತಾಕತ್ತು ಮತ್ತು ಇದನ್ನು ನಾವು ಹೆಮ್ಮೆಯಿಂದ ಪ್ರಪಂಚಕ್ಕೆ ಹೇಳುತ್ತೇವೆ ಎಂದು ತಿಳಿಸಿದರು.

2019-05-17 17:45:36

ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವ ವಿಶ್ವಾಸ

ಅಮಿತ್​ ಶಾ ಮಾತು

ನವದೆಹಲಿ: ಮೇ.19ರಂದು ದೇಶದಲ್ಲಿ ಕೊನೆಯ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಭಾರತೀಯ ಜನತಾ ಪಾರ್ಟಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. 

2019-05-17 17:01:33

ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ: ಮೋದಿ ವಿಶ್ವಾಸ

  • ಸಂಜೋತಾ ಎಕ್ಸ್​ಪ್ರೆಸ್​ ಪ್ರಕರಣದಲ್ಲಿ ಎಲ್​ಇಟಿ ಉಗ್ರರನ್ನು ಬಿಡುಗಡೆ ಮಾಡಿ, ಮಾಲೆಗಾಂವ್​ ಸ್ಫೋಟದಲ್ಲಿ ಅಮಾಯಕರನ್ನು ಶಿಕ್ಷೆಗೆ ಗುರಿ ಮಾಡಿದ್ದು ಕಾಂಗ್ರೆಸ್​- ಅಮಿತ್​ ಶಾ 
  • ಪ್ರಜ್ಞಾ ಸಿಂಗ್​  ಅವರನ್ನು ಚುನಾವಣೆಗೆ ನಿಲ್ಲಿಸಿದ್ದು ಮಾಲೆಗಾಂವ್​ ಫೇಕ್​ ಕೇಸ್​ ವಿರುದ್ಧದ ಪ್ರತಿಭಟನೆ. 
  • ರಫೇಲ್​ ವಿವಾದ ಸಂಬಂಧ ರಾಹುಲ್ ಬಳಿ ಇರುವ ಸಾಕ್ಷಿಯನ್ನು ಸುಪ್ರೀಂ ಕೋರ್ಟ್​ಗೆ ಕೊಡಲಿ. ರಾಜಕೀಯ ಹೇಳಿಕೆ ನೀಡುವುದರಲ್ಲಿ ಪ್ರಯೋಜನ ಇಲ್ಲ- ಅಮಿತ್​ ಶಾ. 
  • ಚುನಾವಣೆ ಹಿನ್ನೆಲೆಯಲ್ಲಿ ಪತ್ರಕರ್ತರು ಧಣಿವರಿಯದೆ ಕೆಲಸ ಮಾಡಿದ್ದಾರೆ. 
  • ಪೂರ್ಣ ಬಹುಮತ ಇರುವ ಸರ್ಕಾರ. ಇದು ಎಲ್ಲರ ಮಹದಾಸೆ. ಬಿಜೆಪಿ ಇದನ್ನು ನೆರವೇರಿಸುತ್ತೆ. 
  • ಜನಗಳ ಮಧ್ಯೆ ನಿರ್ಧಾರ ಕೈಗೊಂಡು ಜಾರಿಗೆ ತರುವ ಅನಿವಾರ್ಯತೆ ಇತ್ತು ಅದನ್ನು ನಾವು ಮಾಡಿದ್ದೇವೆ. 
  • ನನಗೆ ಐದು ವರ್ಷ ಅಧಿಕಾರ ನಡೆಸಲು ಅವಕಾಶ ನೀಡಿದ್ದಕ್ಕೆ ಜನರಿಗೆ ಧನ್ಯವಾದ ಹೇಳಲು ಮಾಧ್ಯಮಗಳ ಮುಂದೆ ಹಾಜರಾಗಿದ್ದೇನೆ. 
  • ಚುನಾವಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ 
  • ಅಧಿಕಾರ ದೊರೆತ ನಂತರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವ ಎಲ್ಲ ಅಂಶಗಳನ್ನು ಆದಷ್ಟು ಬೇಗ ಜಾರಿಗೆ ತರುತ್ತೇವೆ. 
  • ಸಂಘಟನೆ ಆಧಾರದ ಮೇಲೆ ಚುನಾವಣೆ ನಡೆದಿದೆ. ಇಲ್ಲಿ ಒಗ್ಗಟ್ಟು ಪ್ರಮುಖ ಪಾತ್ರ ವಹಿಸಿತು. 
  • ಪ್ರಾಮಾಣಿಕ ಆಡಳಿತ ಐದು ವರ್ಷಗಳ ಹಿಂದೆ ಮೇ 17ಕ್ಕೆ ಶುರುವಾಯಿತು. 
  • ಅಧಿಕಾರಕ್ಕೆ ಅಂಟಿಕೊಂಡಿದ್ದವರಿಗೆ ಮೋದಿ ನೋಡಿ ಭಯವಾಯಿತು. 
  • ಸಮಾಜದ ಕೊನೆಯ ವ್ಯಕ್ತಿಗೆ ಸೌಲಭ್ಯ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರದ ಕೀರ್ತಿ. 
  • ಈವರೆಗೆ ಹಾಕಿಕೊಂಡಿದ್ದ ಒಂದೂ ಕಾರ್ಯಕ್ರಮ ರದ್ದಾಗಲಿಲ್ಲ. 
  • ಸಂಜೆ ಕಾರ್ಯಕ್ರಮ ಮುಗಿದ ನಂತರ ಮತ್ತೆ ನನ್ನ ಕೆಲಸಗಳಲ್ಲಿ ಮಗ್ನನಾಗುತ್ತೇನೆ
  • ನಾವು ದೇಶವನ್ನು ಮುಂದೆ ತೆಗೆದುಕೊಂಡು ಹೋಗಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ
  • ಈವರೆಗೆ ಸಕಾರಾತ್ಮಕವಾಗಿ ಚುನಾವಣೆ ನಡೆದಿದೆ
  • ನಾವು ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ  ಬರುತ್ತೇವೆ.
  • ದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗುವಂತೆ ನೋಡಿಕೊಂಡಿದ್ದೇವೆ
  • ಪತ್ರಕರ್ತರು ಕೇಳಿದ ಪ್ರಶ್ನೆಗೆ ಗರಂ ಆದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ
  • ಈವರೆಗೆ ಹಾಕಿಕೊಂಡಿದ್ದ ಒಂದೂ ಕಾರ್ಯಕ್ರಮ ರದ್ದಾಗಲಿಲ್ಲ. 
  • ಸಂಜೆ ಕಾರ್ಯಕ್ರಮ ಮುಗಿದ ನಂತರ ಮತ್ತೆ ನನ್ನ ಕೆಲಸಗಳಲ್ಲಿ ಮಗ್ನನಾಗುತ್ತೇನೆ. 
  • ನಮ್ಮ 80 ಕಾರ್ಯಕರ್ತರು ಹತರಾಗಿದ್ದಾರೆ ಮಮತಾ ಅವರ ಬಳಿ ಅದಕ್ಕೆ ಉತ್ತರ ಏನಿದೆ?- ಅಮಿತ್​ ಶಾ 
  • ಪತ್ರಕರ್ತರ ಪ್ರಶ್ನೆಗೆ ಗರಂ ಆದ ಅಮಿತ್​ ಶಾ. 
  • ಪತ್ರಕರ್ತರ ಪ್ರಶ್ನೆಗೆ ನಾನು ಉತ್ತರಿಸೋಲ್ಲ, ಅಮಿತ್ ಶಾ ಕೇಳಿ- ಮೋದಿ 
  • ನಾವು ಶಿಸ್ತನ್ನು ಪಾಲಿಸುತ್ತೇವೆ. ನಮಗೆ ಅಧ್ಯಕ್ಷರೇ ಎಲ್ಲ- ಮೋದಿ 
  • ಸಾಧ್ವಿಗೆ ತಕ್ಷಣದಿಂದಲೇ ಜಾರಿಯಾಗುವಂತೆ ನೋಟಿಸ್​ ನೀಡಿದ್ದೇವೆ. ಹತ್ತು ದಿನಗಳ ನಂತರ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. 
  • ಎಲ್ಲ ಪ್ರಶ್ನೆಗಳಿಗೂ ಮೋದಿ ಉತ್ತರ ಕೊಡಬೇಕೆಂದು ಏನಿಲ್ಲ:ಪತ್ರಕರ್ತರ ಪ್ರಶ್ನೆಯಿಂದ ಮತ್ತೆ ಜಾರಿಕೊಂಡ ಪಿಎಂ
  • ನಳಿನ್​ ಕುಮಾರ್​ ಕಟೀಲು, ಅನಂತಕುಮಾರ ಹೆಗಡೆ ಸೇರಿದಂತೆ ಮೂವರಿಗೆ ನೋಟಿಸ್​ ಜಾರಿ

2019-05-17 16:59:44

ಮೋದಿ, ಷಾಗೆ ಅಪರಿಮಿತ ಹಣದ ಬಲವಿದೆ: ರಾಹುಲ್​ ಗಾಂಧಿ ವಾಗ್ದಾಳಿ

  • ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಟಿ
  • 23 ಕ್ಕೆ ದೇಶದ ಜನತೆಗೆ ಸೂಕ್ತ ಉತ್ತರ ಸಿಗಲಿದೆ.
  •  ಕೊನೆಗೂ ನರೇಂದ್ರ ಮೋದಿ ಸುದ್ದಿಗೋಷ್ಟಿಗೆ ಬಂದಿದ್ದು ಖುಷಿ ತಂದಿದೆ.
  • ಮೋದಿಗೆ ನಾನು ರಫೇಲ್ ಹಗರಣದ ಬಗ್ಗೆ ಪ್ರಶ್ನೆ ಕೇಳುವೆ.
  • ಮೋದಿ, ಷಾಗೆ ಅಪರಿಮಿತ ಹಣದ ಬಲವಿದೆ
  • ಮುಂದಿನ ಪ್ರಧಾನಿ ಯಾರು ಎಂಬುದನ್ನು  ದೇಶದ ಜನತೆ ನಿರ್ಧರಿಸುತ್ತಾರೆ.
  •  ದೇಶದ ಜನತೆ ಹಾಗು ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸಿದ ರಾಹುಲ್ ಗಾಂಧಿ 

2019-05-17 16:48:44

ದೇಶದಲ್ಲಿ ಮೋದಿ ಸರ್ಕಾರ ರಚನೆಗೆ ದೇಶದ ಜನರು ಉತ್ಸಾಹ

ನವದೆಹಲಿ: ಮೇ.19ರಂದು ದೇಶದಲ್ಲಿ ಕೊನೆಯ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಭಾರತೀಯ ಜನತಾ ಪಾರ್ಟಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. 

ಆರಂಭದಲ್ಲಿ ಮಾತನಾಡಿದ ಅಮಿತ್​ ಶಾ, ಈ ಮಹಾಚುನಾವಣೆಯಲ್ಲಿ ದೇಶದ ಜನರು ನಮ್ಮೊಂದಿಗಿದ್ದು, ದೇಶದಲ್ಲಿ ಮೋದಿ ಸರ್ಕಾರ ರಚನೆಗೆ ದೇಶದ ಜನರು ಉತ್ಸಾಹ ತೋರಿದ್ದಾರೆಂದು ತಿಳಿಸಿದರು.ಮೋದಿ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ. ಕೇಂದ್ರ ಸರ್ಕಾರ ಎಲ್ಲ ವರ್ಗದ ಜನರಿಗೆ ತಲುಪುವಂತಹ ಯೋಜನೆ ಜಾರಿಗೆ ತಂದಿದ್ದಾರೆ.15 ದಿನಕ್ಕೊಮ್ಮೆ ಮೋದಿ ಸರ್ಕಾರ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು,ಭ್ರಷ್ಟ್ರಾಚಾರದ ವಿರುದ್ಧ ಹೋರಾಡಲು ಈ ಚುನಾವಣೆ ಮಹತ್ವವಾಗಿದೆ ಎಂದು ತಿಳಿಸಿದರು.

ನಾವು ಮತ್ತೆ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುತ್ತೇವೆ.ಈವರೆಗಿನ ಚುನಾವಣೆಗಳಲ್ಲಿ ಅತಿದೊಡ್ಡ ಗೆಲುವು ಲಭ್ಯವಾಗಿದೆ.ಅಧಿಕಾರದ ಅವಧಿ ಅಂತ್ಯಗೊಳ್ಳುತ್ತಿದ್ದು, ಮತ್ತೊಮ್ಮೆ ಹೊಸ ಸರ್ಕಾರ ರಚನೆ ಮಾಡುತ್ತೇವೆಂದು ತಿಳಿಸಿದರು.ಚುನಾವಣೆಗಾಗಿ ತಳಮಟ್ಟದಿಂದಲೇ ಚುನಾವಣಾ ಪ್ರಚಾರ ಆರಂಭ ಮಾಡಿದ್ದು, ಯಶಸ್ಸು ನೀಡಿದೆ ಎಂದು ತಿಳಿಸಿದರು. 
ಇದೀಗ ದೇಶದ 16 ರಾಜ್ಯಗಳಲ್ಲಿ ನಾವು ಅಧಿಕಾರ ನಡೆಸುತ್ತಿದ್ದೇವೆ. ಈ ಮಹಾ ಚುನಾವಣೆ ಸಂದರ್ಭದಲ್ಲಿ ಜನತೆ ನಮ್ಮ ಜೊತೆ ಇದ್ದಾರೆ.ದಲಿತರು, ಮಹಿಳೆಯರ, ಆದಿವಾಸಿಗಳ ಅಭಿವೃದ್ದಿಗೆ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇವೆ.ನಾವು ಮತ್ತೆ ಮೋದಿ ಸರ್ಕಾರದಲ್ಲಿ ಅಧಿಕಾರ ನಡೆಸುತ್ತೇವೆ. ನಮ್ಮ ಈ ಬಾರಿಯ ಅಧಿಕಾರವಾಧಿ ಅಂತ್ಯಗೊಳ್ಳುತ್ತಿದೆ. ಮುಂದೆ ಇದಕ್ಕಿಂತಲೂ ಹೆಚ್ಚಿನ ಬಹುಮತದೊಂದಿಗೆ ಆಡಳಿತ ನಡೆಸುತ್ತೇವೆ.ಸ್ವಾತಂತ್ರ್ಯಾ ನಂತರ ನಡೆದ ಚುನಾವಣೆಗಳಲ್ಲಿ ಇದು ಅತ್ಯಂತ ಸುದೀರ್ಘ ಚುನಾವಣೆಯಾಗಿದೆ ಎಂದು ತಿಳಿಸಿದರು.

Last Updated : May 17, 2019, 5:59 PM IST

ABOUT THE AUTHOR

...view details