ಮುಂಬೈ: ಎನ್ಸಿಪಿ ಮುಖಂಡ ಶರದ್ ಪವಾರ್ ಭೇಟಿ ಬಳಿಕ ಅದೇ ದಿನ ಸಂಜೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮನೆಯಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಣಿಸಿಕೊಂಡಿದ್ದಾರೆ. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಶಾರುಖ್ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆಯೇ ಎಂಬ ಊಹಾ - ಪೋಹಗಳು ಹರಿದಾಡಿದ್ದವು.
ಪವಾರ್ ಬಳಿಕ ಶಾರುಖ್ ಭೇಟಿ ಮಾಡಿದ ಪ್ರಶಾಂತ್.. ಸಾರ್ವಜನಿಕ ವಲಯದಲ್ಲಿ ಚರ್ಚೆ - Shahrukh khan latest News
ಶರದ್ ಪವಾರ್ ಭೇಟಿ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಪ್ರಶಾಂತ್ ಕಿಶೋರ್ ಭೇಟಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾರುಖ್ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆಯೇ ಎಂಬ ಊಹಾಪೋಹಗಳು ಹರಿದಾಡಿದ್ದವು.
![ಪವಾರ್ ಬಳಿಕ ಶಾರುಖ್ ಭೇಟಿ ಮಾಡಿದ ಪ್ರಶಾಂತ್.. ಸಾರ್ವಜನಿಕ ವಲಯದಲ್ಲಿ ಚರ್ಚೆ Sha Rukh Khan and Prashant](https://etvbharatimages.akamaized.net/etvbharat/prod-images/768-512-12110794-1093-12110794-1623506871352.jpg)
ಶಾರುಖ್ ಖಾನ್ ಮತ್ತು ಪ್ರಶಾಂತ್ ಕಿಶೋರ್
ಇನ್ನು ಶಾರೂಖ್ ಅಭಿನಯಿಸುತ್ತಿರುವ ಮುಂಬರುವ ಸಿನಿಮಾ 'ರೆಡ್ ಚಿಲ್ಲಿಸ್' ಎಂಬುದು ಪ್ರಶಾಂತ್ ಕಿಶೋರ್ ಜೀವನಾಧಾರಿತ ಸಿನಿಮಾವೇ ಎಂಬೆಲ್ಲಾ ಪ್ರಶ್ನೆಗಳು ಉದ್ಭವಗೊಂಡಿದ್ದವು.
ಆದರೆ, ಈ ವದಂತಿಗಳು ಸುಳ್ಳು. ಶಾರುಖ್ ಮತ್ತು ಪ್ರಶಾಂತ್ ಸ್ನೇಹಿತರಾಗಿದ್ದಾರೆ. ಅವರು ಆಗಾಗ ಭೇಟಿಯಾಗುತ್ತಾರೆ. ಅಷ್ಟೇ ಅಲ್ಲದೆ, ಶಾರುಖ್ ಖಾನ್ ಅವರ ರಾಜಕೀಯ ಪ್ರವೇಶದ ವದಂತಿಗಳನ್ನು ನಿಷ್ಪ್ರಯೋಜಕ ಎಂದು ಮೂಲಗಳು ತಿಳಿಸಿದೆ
Last Updated : Jun 12, 2021, 7:40 PM IST