ಕರ್ನಾಟಕ

karnataka

ETV Bharat / briefs

ಹಗುರಾಗಿ ಪರಿಗಣಿಸಬೇಡಿ ಬಲಿಷ್ಠ ತಂಡಗಳಿಗೆ ಆಫ್ಘಾನಿಸ್ತಾನ ಎಚ್ಚರಿಕೆ.. ಹೀಗಿದೆ 15 ಸದಸ್ಯರ ವಿಶ್ವಕಪ್​ ತಂಡ - ಗುಲ್ಬದಿನ್​ ನೈಬ್​

ಕಳೆದೆರಡು ವರ್ಷಗಳಲ್ಲಿ ಸೀಮಿತ ಓವರ್​ಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಫ್ಘಾನಿಸ್ತಾನ ಅರ್ಹತಾ ಸುತ್ತಿನಲ್ಲಿ ವೆಸ್ಟ್​​ ಇಂಡೀಸ್​ ತಂಡವನ್ನು ಮಣಿಸಿ ಚಾಂಪಿಯನ್​ ಆಗುವ ಮೂಲಕ ವಿಶ್ವಕಪ್​ಗೆ ಎಂಟ್ರಿ ಪಡೆದುಕೊಂಡಿದೆ.

afg

By

Published : Apr 22, 2019, 1:34 PM IST

ನವದೆಹಲಿ: ಇಂಗ್ಲೆಂಡ್​ನಲ್ಲಿ ನಡೆಯುವ ವಿಶ್ವಕಪ್​ಗೆ 15 ಸದಸ್ಯರ ತಂಡವನ್ನು ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ​ ಇಂದು ಬಿಡುಗಡೆ ಮಾಡಿದೆ.

ಕಳೆದೆರಡು ವರ್ಷಗಳಲ್ಲಿ ಸೀಮಿತ ಓವರ್​ಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಫ್ಘಾನಿಸ್ತಾನ ಅರ್ಹತಾ ಸುತ್ತಿನಲ್ಲಿ ವೆಸ್ಟ್​​ ಇಂಡೀಸ್​ ತಂಡವನ್ನು ಮಣಿಸಿ ಚಾಂಪಿಯನ್​ ಆಗುವ ಮೂಲಕ ವಿಶ್ವಕಪ್​ಗೆ ಭರ್ಜರಿ ಎಂಟ್ರಿ ಪಡೆದುಕೊಂಡಿದೆ.

ಎರಡನೇ ವಿಶ್ವಕಪ್​ ಆಡುತ್ತಿರುವ ಆಫ್ಘಾನಿಸ್ಥಾನ ತಂಡ 2015ರ ತಂಡಕ್ಕಿಂತ ಭಿನ್ನವಾಗಿದೆ. ಈಗಾಗಲೇ ಶ್ರೀಲಂಕಾ, ಬಾಂಗ್ಲಾದೇಶ,ವಿಂಡೀಸ್​ ತಂಡಗಳನ್ನು ಮಣಿಸಿ ಭಾರತದಂತಹ ಬಲಿಷ್ಠ ತಂಡಗಳಿಗೂ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದೆ. ಅದಕ್ಕೆ ಏಷ್ಯಾಕಪ್​ನಲ್ಲಿ ಆಫ್ಘಾನ್​ ತಂಡ ನೀಡಿದ ಪ್ರದರ್ಶನವೇ ಸಾಕ್ಷಿ.

15 ಸದಸ್ಯರ ಆಫ್ಘಾನಿಸ್ತಾನ ತಂಡ

ಆದರೆ, ದುರಾದೃಷ್ಟವೆಂದರೆ ಕಳೆದ 2-3 ವರ್ಷಗಳಿಂದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅಸ್ಘರ್​ ಆಫ್ಘಾನ್​ರನ್ನು ನಾಯಕತ್ವದಿಂದ ಕೆಳಗಿಳಿಸಿ ಗುಲ್ಬದಿನ್​ ನೈಬ್​ಗೆ ಕ್ಯಾಪ್ಟನ್‌ ಪಟ್ಟ ಕಟ್ಟಲಾಗಿದೆ. ಇದು ತಂಡದ ಕೆಲ ಆಟಗಾರರಲ್ಲೂ ಇರಿಸುಮುರಿಸು ತಂದಿದೆ. ಆದರೆ, ಒಟ್ಟಾರೆಆಫ್ಘಾನ್‌ ತಂಡವನ್ನು ನೋಡುವುದಾದರೆ ಯಾವುದೇ ತಂಡಕ್ಕಾದರು ಪೈಪೋಟಿ ನೀಡುವುದರ ಮಟ್ಟಿಗಿರುವುದು ಮಾತ್ರ ಸುಳ್ಳಲ್ಲ.

15 ಸದಸ್ಯರ ತಂಡ ಇಂತಿದೆ :

ಗುಲ್ಬದಿನ್​ ನೈಬ್(ನಾಯಕ),ಮೊಹಮ್ಮದ್​ ಶಹ್ಜಾದ್​(ವಿಕೀ), ನೂರ್​ ಅಲಿ ಜಾರ್ಡನ್​, ರಶೀದ್​ ಖಾನ್​, ಹಜರತುಲ್ಹಾ ಝಾಝೈ, ರೆಹ್ಮತ್​ ಶಾ, ಅಸ್ಘರ್​ ಆಫ್ಘಾನ್, ಹಶ್ಮತುಲ್ಹಾ ಶಾಹಿದಿ, ನಜೀಬುಲ್ಹಾ ಝಾರ್ಡನ್, ​ಸಮೀಉಲ್ಹಾ ಶಿನ್ವಾರಿ, ಮೊಹಮ್ಮದ್​ ನಬಿ, ದವ್ಲಾತ್​ ಝಾರ್ಡನ್​, ಅಫ್ಟಾಬ್​ ಆಲಂ, ಹಮೀದ್​ ಹಸ್ಸನ್​, ಮೂಜೀಬ್​ ಉರ್ ರೆಹ್ಮಾನ್.

ABOUT THE AUTHOR

...view details