ಬಾಲಿವುಡ್ ನಟಿ ಯಾಮಿ ಗೌತಮ್ ಜೂನ್ 4ರಂದು ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ನೂತನ ವಧುವಿನ ಲುಕ್ನಲ್ಲಿ ಮಿಂಚುತ್ತಿರುವ ಯಾಮಿ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿದ್ದಾರೆ.
ವಧುವಿನ ಲುಕ್ನಲ್ಲಿ ಯಾಮಿ ಮಿಂಚಿಂಗ್... ಅಭಿಮಾನಿಗಳು ಗಲಿಬಿಲಿ - ಯಾಮಿ ಗೌತಮ್ ಮದುವೆ ಫೋಟೋ
ನಟಿ ಯಾಮಿ ಗೌತಮ್ ಹಾಗೂ ನಿರ್ದೇಶಕ ಆದಿತ್ಯ ಧಾರ್ ವಿವಾಹ ಬಂಧಕ್ಕೆ ಒಳಗಾಗಿದ್ದಾರೆ. ಇದೀಗ ನೂತನ ವಧುವಿನ ಲುಕ್ನಲ್ಲಿರುವ ಯಾಮಿ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
yAmi gautham
ಒಡವೆಗಳಿಂದ ಕಂಗೊಳಿಸುತ್ತಿರುವ ಯಾಮಿ ಕೆಂಪು ಸೀರೆ ಧರಿಸಿ ಕ್ಯಾಮೆರಾಗೆ ಫೋಸ್ ನೀಡುತ್ತಿರುವ ದೃಶ್ಯ ಎಂಥವರನ್ನೂ ನಾಚಿಸುವಂತಿದೆ. ತಲೆಯ ಮೇಲೆ ಸಿಂಧೂರ ನೂತನ ವಧುವಿನ ಅಂದವನ್ನು ಇಮ್ಮಡಿಗೊಳಿಸುತ್ತಿದೆ.
ಇತ್ತೀಚಿಗೆ ಮದುವೆ ಸಂಭ್ರಮದ ಫೋಟೋ ಹಾಕಿ, ನಮ್ಮ ಕುಟುಂಬಗಳ ಆಶೀರ್ವಾದದೊಂದಿಗೆ ನಾವಿಬ್ಬರು ವಿವಾಹವಾಗಿದ್ದೇವೆ. ಜೀವನದ ಹೊಸ ಪ್ರಯಾಣ ಆರಂಭವಾಗಿದ್ದು, ನಿಮ್ಮೆಲ್ಲರ ಹಾರೈಕೆ ಇರಲಿ, ನಿಮ್ಮ ಪ್ರೀತಿಯ ಯಾಮಿ ಮತ್ತು ಆದಿತ್ಯ ಎಂದು ಬರೆದುಕೊಂಡಿದ್ದಾರೆ.