ಕರ್ನಾಟಕ

karnataka

ETV Bharat / briefs

ಗರ್ಭಿಣಿಯಾಗಿದ್ದರೂ ವಾಕ್ಸಿನ್​ ‌ಹಾಕಿಸಿಕೊಂಡ ನಟಿ ನಯನಾ ಪುಟ್ಟಸ್ವಾಮಿ! - ಮೊದಲ ಹಂತದ ಕೋವಿಡ್ ಲಸಿಕೆ ಪಡೆದ ನಯನಾ ಪುಟ್ಟಸ್ವಾಮಿ

ನಾನು ಫಿಲಿಡೆಲ್ಫಿಯಾದಲ್ಲಿ ಇದ್ದೇನೆ. ನಾನು ಇಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಬೇಕೆಂದಿರುವೆ. ಆದರೆ, ನನ್ನ ಆಸೆ ಮರಳಿ ಕನ್ನಡ ಚಿತ್ರೋದ್ಯಮಕ್ಕೆ ಬರುವುದು. ಕರ್ನಾಟಕ ಹಾಗೂ ಕನ್ನಡಕ್ಕಾಗಿ ಏನನ್ನಾದರೂ ಮಾಡಬೇಕೆಂದಿರುವೆ..

Nayana puttaswami
Nayana puttaswami

By

Published : May 2, 2021, 7:29 PM IST

ನಟಿ ಹಾಗೂ ಬಿಗ್​ಬಾಸ್ ಸೀಸನ್ 6ರ ಮಾಜಿ ಸ್ಪರ್ಧಿ ನಯನಾ ಪುಟ್ಟಸ್ವಾಮಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಹಂತದ ಕೋವಿಡ್ ಲಸಿಕೆ ಪಡೆದುಕೊಂಡಿರುವ ನಯನಾ ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ಫೋಟೋ ಶೇರ್ ಮಾಡುವುದರೊಂದಿಗೆ "ಈಗಷ್ಟೇ ಲಸಿಕೆ ತೆಗೆದುಕೊಂಡೆ. ನೀವಿನ್ನು ಪಡೆದಿಲ್ಲವಾದರೆ ಶೀಘ್ರವೇ ಲಸಿಕೆ ತೆಗೆದುಕೊಳ್ಳಿ" ಎಂದು ಬರೆದುಕೊಂಡಿದ್ದಾರೆ. ಸದ್ಯ ಫಿಲಿಡೆಲ್ಫಿಯಾದಲ್ಲಿ ವಾಸಿಸುತ್ತಿರುವ ನಯನಾ, "ನನ್ನ ಗಂಡ ಇಲ್ಲಿ ಯುನಿವರ್ಸಿಟಿಯಲ್ಲಿ ಕೆಲಸ ಪಡೆದಿದ್ದಾರೆ.

ಹೀಗಾಗಿ, ನಾನು ಫಿಲಿಡೆಲ್ಫಿಯಾದಲ್ಲಿ ಇದ್ದೇನೆ. ನಾನು ಇಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಬೇಕೆಂದಿರುವೆ. ಆದರೆ, ನನ್ನ ಆಸೆ ಮರಳಿ ಕನ್ನಡ ಚಿತ್ರೋದ್ಯಮಕ್ಕೆ ಬರುವುದು. ಕರ್ನಾಟಕ ಹಾಗೂ ಕನ್ನಡಕ್ಕಾಗಿ ಏನನ್ನಾದರೂ ಮಾಡಬೇಕೆಂದಿರುವೆ.

ಇದನ್ನು ಸಾಧಿಸಲು ನನಗೆ ಜ್ಞಾನದ ಅಗತ್ಯವಿದೆ. ಹೀಗಾಗಿ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡುವ ಉದ್ದೇಶವಿದೆ" ಎಂದಿದ್ದಾರೆ. ನಯನಾ ಮಾತ್ರವಲ್ಲದೆ ಕಲಾವಿದರಾದ ಸುನಿಲ್ ಪುರಾಣಿಕ್,ಗಿರಿಜಾ ಲೋಕೇಶ್, ಪ್ರಿಯಾಂಕಾ ಚಿಂಚೋಳಿ, ರವಿಶಂಕರ್ ಮುಂತಾದ ಕಲಾವಿದರು ಮೊದಲ ಹಂತದ ಕೋವಿಡ್ ಲಸಿಕೆ ಪಡೆದಿದ್ದಾರೆ.

For All Latest Updates

ABOUT THE AUTHOR

...view details