ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯಲ್ಲಿ ನಾಯಕಿ ಇಚ್ಛಾಧಾರಿ ನಾಗಿಣಿ ಅಮೃತಾಳಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ದೀಪಿಕಾ ದಾಸ್ ಅಭಿನಯಕ್ಕೆ ಮನಸೋಲದವರಿಲ್ಲ.
ನಾಗಿಣಿ ಧಾರಾವಾಹಿಯ ನಂತರ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ದೀಪಿಕಾ ದಾಸ್ ಸಾಕಷ್ಟು ಜನಪ್ರಿಯತೆ ಗಳಿಸಿದರು. ಟಾಪ್ 4 ನೇ ಸ್ಥಾನದಲ್ಲಿದ್ದ ದೀಪಿಕಾ ದಾಸ್ ತಮ್ಮ ಮಾತು, ನಗು, ನಡವಳಿಕೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ದೊಡ್ಮನೆಯಿಂದ ಹೊರಬಂದ ಬಳಿಕ ನಟನಾ ಕ್ಷೇತ್ರದಿಂದ ದೂರವಿದ್ದ ದೀಪಿಕಾ ದಾಸ್ ಉದ್ಯಮಿಯಾಗಿ ಬದಲಾದರು. ತಮ್ಮ ಫ್ಯಾಷನ್ ಹಾಗೂ ಸ್ಟೈಲ್ನಿಂದಾಗಿ ಹೆಣ್ಣು ಮಕ್ಕಳ ಮನ ಸೆಳೆದಿರುವ ಚೆಂದುಳ್ಳಿ ಚೆಲುವೆ ದೀಪಿಕಾ ದಾಸ್ ತಮ್ಮದೇ ಆದ ಕ್ಲಾಥಿಂಗ್ ಬ್ರಾಂಡ್ ಶುರು ಮಾಡಿದ್ದಾರೆ.
ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ದೀಪಿಕಾ ದಾಸ್ ತಮ್ಮದೇ ಆದ ಯೂಟ್ಯೂಬ್ ಚಾನಲ್ ಶುರು ಮಾಡಿದ್ದಾರೆ. ಮಾತ್ರವಲ್ಲ, ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಜರ್ನಿ ಆಫ್ ದೀಪಿಕಾ ದಾಸ್ ಎಂಬ ವಿಡಿಯೋದ ಪ್ರೋಮೋ ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಜೀವನದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ದೀಪಿಕಾ ದಾಸ್.