ದೀಕ್ಷಿತ್ ಶೆಟ್ಟಿ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ದೀಕ್ಷಿತ್ ಶೆಟ್ಟಿ ಇದೀಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.
ಮತ್ತೆ ಕಿರುತೆರೆಗೆ ಮರಳಿದ ದಿಯಾ ಸಿನಿಮಾ ನಾಯಕ! - ದೀಕ್ಷಿತ್ ಶೆಟ್ಟಿ ಮುಂಬರುವ ಸಿನಿಮಾ
ದಿ ರೋಸ್ ವಿಲ್ಲಾ ಸಿನಿಮಾದ ಮೂಲಕ ತೆಲುಗು ಸಿನಿರಂಗಕ್ಕೆ ಕಾಲಿಟ್ಟಿರುವ ದೀಕ್ಷಿತ್ ಶೆಟ್ಟಿ, ಮತ್ತೊಂದು ತೆಲುಗು ಚಿತ್ರ ಮುಗ್ಗುಲು ಮೊನಗುಲ್ಲುವಿನಲ್ಲಿ ನಟಿಸಲಿದ್ದಾರೆ. ಆ ಚಿತ್ರದಲ್ಲಿ ಮೂಕನ ಪಾತ್ರದಲ್ಲಿ ದೀಕ್ಷಿತ್ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ವಿಶೇಷ ತರಬೇತಿಯನ್ನು ಕೂಡ ಅವರು ಪಡೆದಿದ್ದಾರೆ..
ನಾಗಿಣಿ ಧಾರಾವಾಹಿ ಮುಗಿದ ಬಳಿಕ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡು ಹಿರಿತೆರೆಗೆ ಹಾರಿದ ದೀಕ್ಷಿತ್ ಶೆಟ್ಟಿ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯ ಮೂಲಕ ಕಿರುತೆರೆಗೆ ವಾಪಸಾಗಿರುವ ದೀಕ್ಷಿತ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಇಲ್ಲ ಪೂರ್ಣ ಪ್ರಮಾಣದಲ್ಲಿ ನಟಿಸುತ್ತಾರಾ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ದಿಯಾ ಸಿನಿಮಾದಲ್ಲಿ ನಾಯಕ ರೋಹಿತ್ ಆಗಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಿದ ದೀಕ್ಷಿತ್ ಶೆಟ್ಟಿ ಕೆಟಿಎಂ, ಶ್ರೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ದಿ ರೋಸ್ ವಿಲ್ಲಾ ಸಿನಿಮಾದ ಮೂಲಕ ತೆಲುಗು ಸಿನಿರಂಗಕ್ಕೆ ಕಾಲಿಟ್ಟಿರುವ ದೀಕ್ಷಿತ್ ಶೆಟ್ಟಿ, ಮತ್ತೊಂದು ತೆಲುಗು ಚಿತ್ರ ಮುಗ್ಗುಲು ಮೊನಗುಲ್ಲುವಿನಲ್ಲಿ ನಟಿಸಲಿದ್ದಾರೆ. ಆ ಚಿತ್ರದಲ್ಲಿ ಮೂಕನ ಪಾತ್ರದಲ್ಲಿ ದೀಕ್ಷಿತ್ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ವಿಶೇಷ ತರಬೇತಿಯನ್ನು ಕೂಡ ಅವರು ಪಡೆದಿದ್ದಾರೆ.