ವಿಜಯಪುರ:ಭೀಮಾತೀರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಇಂಡಿ ಎಸಿ ನೇತ್ವತೃದ ತಂಡ 629 ಕ್ಯೂಬಿಕ್ ಮೀಟರ್ ಅಕ್ರಮ ಮರಳು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಏಕಕಾಲದಲ್ಲಿ ಎರಡು ಗ್ರಾಮದ ಮೇಲೆ ದಾಳಿ ನಡೆಸಲಾಗಿದೆ.
ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ನೇತೃತ್ವದಲ್ಲಿ ತಹಶೀಲ್ದಾರ್, ಪೋಲಿಸ್ ಇಲಾಖೆ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಸಿಂದಗಿ ತಾಲೂಕಿನ ದೇವಣಗಾಂವ ಮತ್ತು ಶಂಭೆವಾಡ ಗ್ರಾಮ ವ್ಯಾಪ್ತಿಯ ಭೀಮಾನದಿ ಪಾತ್ರದಲ್ಲಿ ಅನಿರೀಕ್ಷಿತವಾಗಿ ದಾಳಿ ನಡೆಸಿದೆ. ಈ ವೇಳೆ 629 ಕ್ಯೂಬಿಕ್ ಮೀಟರ್ ಅನಧಿಕೃತ ಮರಳನ್ನು ವಶಕ್ಕೆ ಪಡೆದಿದೆ.