ಮುಂಬೈ: ವಿಶ್ವಕಂಡಂತಹ ಶ್ರೇಷ್ಠ ಆಟಗಾರ, ಮಿ,360 ಎಂದೇ ಪ್ರಸಿದ್ದರಾಗಿರುವ ಎಬಿ ಡಿ ವಿಲಿಯರ್ಸ್ ತಮ್ಮ ಜೀವನದ ಕ್ರಿಕೆಟ್ ಅತ್ಯುತ್ತಮ ಸಂದರ್ಭ ಯಾವುದೆಂದು ತಿಳಿಸಿದ್ದು, ಇದು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಎಬಿ ಡಿ ಯಾವುದೇ ದೇಶಕ್ಕೆ ಹೋದರು ಅಲ್ಲಿ ಕ್ರೀಡಾಭಿಮಾನಿಗಳು ತಮ್ಮ ದೇಶದ ಆಟಗಾರರಿಗಿಂತಲೂ ಹೆಚ್ಚಿನ ಅಭಿಮಾನವನ್ನು ಎಬಿ ಡಿ ಮೇಲೆ ತೋರುತ್ತಾರೆ. ಇನ್ನು ಭಾರತದಲ್ಲಿ ನೋಡುವುದಾದರೆ ಎಬಿ ಡಿ ಕ್ರೀಸ್ಗೆ ಇಳಿದರೆ ಅದು ಐಪಿಎಲ್ ಆಗಲಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಲಿ ಎಬಿ ಡಿ ಎಂಬ ಕೂಗು ಮೈದಾನದಲ್ಲಿ ಕೇಳಿಸುತ್ತಿರುತ್ತದೆ.
'ಯೇ ಗೇಮ್ ಹೈ ಮಹಾನ್' ಟ್ಯಾಗ್ನಲ್ಲಿ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದ್ದು, ಆಟಗಾರರು ತಮ್ಮ ವೃತ್ತಿ ಜೀವನದ ಅತ್ಯುತ್ತಮ ಆಟ ಯಾವುದು ಎಂಬುದನ್ನು ತಿಳಿಸುತ್ತಿದ್ದಾರೆ. ಇದಕ್ಕೆ ಎಬಿಡಿ ಕೂಡ ಟ್ವೀಟ್ ಮಾಡಿದ್ದು, ಭಾರತದ ವಿರುದ್ಧ ಭಾರತದಲ್ಲಿ ಆಡುವಾಗ ಭಾರತೀಯ ಅಭಿಮಾನಿಗಳು ನನಗೆ ಸಪೋರ್ಟ್ ಮಾಡಿದ ಆ ದಿನ ನನ್ನ ಜೀವನದ ಅತ್ಯಂತ ಮರೆಯದ ಕ್ಷಣ, ಇದನ್ನು ಮೀರಿಸುವ ಮತ್ತೊಂದು ಘಟನೆ ಇಲ್ಲ ಎಂದು ಬರೆದುಕೊಂಡಿದ್ದಾರೆ.