ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಗೆದ್ದು ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಲು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸಾಕಷ್ಟು ಕಸರತ್ತು ಶುರುಮಾಡುತ್ತಿದ್ದರೆ, ಇಲ್ಲೊಬ್ಬ ಯುವಕ ನರೇಂದ್ರ ಮೋದಿ ಪ್ರಧಾನಿಯಾಗುವರಿಗೂ ತಿಂಡಿ ಮುಟ್ಟದೇ ಧ್ಯಾನದಲ್ಲಿ ಮಗ್ನನಾಗಿದ್ದಾರೆ.
ಮೋದಿ ಪ್ರಧಾನಿಯಾಗಲೆಂದು ಧ್ಯಾನಕ್ಕೆ ಕುಳಿತ ಯುವಕ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಂಟಚಿಕ್ಕನಹಳ್ಳಿ ಗ್ರಾಮದ ನಿವಾಸಿ ರವಿ ಈ ಸಾಹಸಕ್ಕೆ ಮೂಲಕರ್ತನಾಗಿದ್ದಾನೆ.
ಈಗಾಗಲೇ ಒಂದುವಾರದಿಂದ ಊಟ-ತಿಂಡಿಯನ್ನು ಬಿಟ್ಟು ಧ್ಯಾನದಲ್ಲಿ ಮಗ್ನನಾಗಿದ್ದಾನೆ. ನರೇಂದ್ರ ಮೋದಿ ಮುಂದಿನ ಪ್ರಧಾನಿಯಾಗುವರೆಗೂ ಇದೇ ರೀತಿ ಧ್ಯಾನದಲ್ಲಿ ಕುಳಿತಿರುವುದಾಗಿ ತಿಳಿಸಿದ್ದಾನೆ.
ಮುಂಜಾನೆ ಹಾಗೂ ಸಂಜೆ ಅರ್ಧ ಲೀಟರ್ ಹಾಲನ್ನು ಸೇವಿಸಿ ನಂತರ ಧ್ಯಾನದಲ್ಲಿ ತಲ್ಲೀನನಾಗುತ್ತಿದ್ದಾನೆ. ಸದ್ಯ ಮೋದಿ ಅಭಿಮಾನಿಗಳು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.