ಜಿಲ್ಲೆಯ ಪೊತುಮರ್ರು ಶಿವಾರು ಗೊಲ್ಲಗೂಡಂ ಗ್ರಾಮದ ಕಟ್ಟಾ ಅಶ್ವಿನಿ (28) ಮನಸ್ತಾಪಕ್ಕೆ ಗುರಿಯಾಗಿದ್ದರು. ಭಾನುವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮುದ್ದಾದ ಮಕ್ಕಳಾದ ಶರ್ವಾಣಿಪ್ರಿಯ (5) ಮತ್ತು ಕಿರಣ್ ತೇಜ್ಗೆ (2) ಊಟದಲ್ಲಿ ವಿಷ ಹಾಕಿ ಊಟ ಮಾಡಿಸಿದ್ದಾರೆ. ಬಳಿಕ ಅಶ್ವಿನಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮುದ್ದಾದ ಮಕ್ಕಳಿಗೆ ವಿಷವಿಕ್ಕಿ ತಾಯಿ ಆತ್ಮಹತ್ಯೆಗೆ ಯತ್ನ... ಕರುಳ ಬಳ್ಳಿಗಳ ಸಾವು, ತಾಯಿ ಸ್ಥಿತಿ ಗಂಭೀರ! - ತಾಯಿ ಸ್ಥಿತಿ ಗಂಭೀರ
ಕೃಷ್ಣಾ: ಸಣ್ಣ ಮನಸ್ತಾಪಕ್ಕೆ ಗುರಿಯಾಗಿದ್ದ ತಾಯಿಯೊಬ್ಬಳು ಹೆತ್ತ ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಹೀಗೆ ಮಕ್ಕಳಿಗೂ ವಿಷಕೊಟ್ಟು ತಾನೂ ನೋವಿನಿಂದ ನರಳುತ್ತಿದ್ದನ್ನು ಗಮನಿಸಿದ ನೆರಹೊರೆಯವರು ಸಹಾಯಕ್ಕೆ ದೌಡಾಯಿಸಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದ್ರೆ ಇಬ್ಬರು ಮಕ್ಕಳು ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ತಾಯಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಂತ್ರಸ್ಥೆಯಿಂದ ಹೇಳಿಕೆ ಪಡೆದಿದ್ದಾರೆ.