ಕಾರಾಗೃಹಗಳು ಮನ ಪರಿವರ್ತನಾ ಕೇಂದ್ರಗಳಾಗಬೇಕು ಎಂಬ ಚಿಂತನೆಗೆ ಹಾವೇರಿ ಜಿಲ್ಲಾ ಉಪ ಕಾರಾಗೃಹ ಸಾಕ್ಷಿಯಾಗಿದೆ. ನಗರದ ಕೆರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಉಪಕಾರಾಗೃಹದಲ್ಲಿರುವ 180 ಕೈದಿಗಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತಾವೇ ಕಷ್ಟಪಟ್ಟು ಬೆಳೆ ಬೆಳೆದು, ತಾವು ಬಳಸಿ ಉಳಿದ ಫಸಲು ಮಾರಾಟ ಮಾಡುತ್ತಿದ್ದಾರೆ. ಇದ್ರಿಂದ ಎರಡು ತಿಂಗಳಿಗೆ 70 ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ. ಕಾಯಕವೇ ಕೈಲಾಸ ಕಲ್ಪನೆಯಲ್ಲಿ ಅಲ್ಲಿನ ಕೈದಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಮಾದರಿ ಕಾರಾಗೃಹ ಮಾರ್ಪಟ್ಟಿದೆ.
ಕೈದಿಗಳ ಸ್ವಾವಲಂಬಿ ಬದುಕು.... ಇತರರಿಗೂ ಮಾದರಿ...!! - ಇತರರಿಗೂ ಮಾದರಿ
ಹೀಗೆ, ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಹೊಲ.. ಮತ್ತೊಂದೆಡೆ, ಉಳುಮೆ ಮಾಡುತ್ತಿರೋ ಕೈದಿಗಳು.. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಹಾವೇರಿಯ ಜಿಲ್ಲಾ ಉಪ ಕಾರಾಗೃಹದಲ್ಲಿ...
ಕೈದಿಗಳ ಸ್ವಾವಲಂಬಿ ಬದುಕು
ಕಾರಾಗೃಹಕ್ಕೆ ಸೇರಿರುವ ಜಮೀನಿನಲ್ಲಿ ವಿಚಾರಾಣಾಧೀನ ಕೈದಿಗಳು, ತರಕಾರಿ, ಹಣ್ಣು ಸೇರಿದಂತೆ ವಿವಿಧ ಧಾನ್ಯಗಳನ್ನ ಬೆಳೆಯುತ್ತಿದ್ದಾರೆ. ಇದೆಲ್ಲಾ ಜಿಲ್ಲಾಡಳಿತ ಮತ್ತು ಕಾರಾಗೃಹ ಅಧಿಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ. ಜೊತೆಗೆ ತಮ್ಮ ಅಪರಾಧತೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್.
ಕೈದಿಗಳಿಗೆ ಶುದ್ಧವಾದ ಕುಡಿವ ನೀರು, ಆರೋಗ್ಯ ತಪಾಸಣೆ, ಯೋಗ ಶಿಬಿರ, ಗ್ರಂಥಾಲಯವನ್ನೂ ಅಲ್ಲಿ ನಿರ್ಮಿಸಲಾಗಿದೆ. ಇಂತಹ ಉತ್ತಮ ವಾತಾವರಣದಿಂದ ಅಪರಾಧಿಗಳು ಮನಃಪರಿವರ್ತನೆ ಮಾಡಿಕೊಂಡು ಜೀವಿಸುವುದರಲ್ಲಿ ಯಾವುದೇ ಸಂಶಯವಿಲ್ಲ.