ಸಾಮಾನ್ಯವಾಗಿ ಇತಿಹಾಸ ಪುಟದಲ್ಲಿ ರಾಜರು ಅನೇಕ ರಾಣಿಯರನ್ನು ವಿವಾಹವಾಗುತ್ತಿದ್ದರು ಎಂಬುದನ್ನು ಕೇಳಿದ್ದೇವೆ. 21ನೇ ಶತಮಾನದಲ್ಲಿ 2-3 ಪತ್ನಿಯರನ್ನು ಹೊಂದಿರುವವರನ್ನೂ ಕಂಡಿದ್ದೇವೆ. ಆದರೆ, ಇಲ್ಲೊಬ್ಬ ಮಹಾಶಯ 37 ಬಾರಿ ವಿವಾಹವಾಗಿದ್ದಾನೆ. ಈ ರೀತಿಯ ಹೇಳಿಕೆಯನ್ನು ಒಳಗೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟಿಜನ್ಸ್ ಶಾಕ್ ಆಗಿದ್ದಾರೆ.
28 ಮಡದಿಯರ ಮುಂದೆ 37ನೇ ಮದುವೆಯಾದ ಭೂಪ : ನೆಟಿಜನ್ಸ್ ಶಾಕ್ - IPS Officer rupin sharma twitter video
28 ಹೆಂಡತಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂಭಾಗವೇ ವಯಸ್ಸಾದ ವ್ಯಕ್ತಿ 37ನೇ ಬಾರಿಗೆ ಮದುವೆಯಾಗುತ್ತಿದ್ದಾನೆ ಎಂಬ ಹೇಳಿಕೆಯೊಂದಿಗಿನ ವಿಡಿಯೋ ವೈರಲ್ ಆಗಿದೆ. 45 ಸೆಕೆಂಡುಗಳ ವಿಡಿಯೋ ಕ್ಲಿಪ್‌ನ ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ..
28 ಹೆಂಡತಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂಭಾಗವೇ ವಯಸ್ಸಾದ ವ್ಯಕ್ತಿ 37ನೇ ಬಾರಿಗೆ ಮದುವೆಯಾಗುತ್ತಿದ್ದಾನೆ ಎಂಬ ಹೇಳಿಕೆಯೊಂದಿಗಿನ ವಿಡಿಯೋ ವೈರಲ್ ಆಗಿದೆ. 45 ಸೆಕೆಂಡುಗಳ ವಿಡಿಯೋ ಕ್ಲಿಪ್‌ನ ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನೆಟಿಜನ್ಸ್, ಎಂಥಾ ಅದೃಷ್ಟವಯ್ಯಾ! ಎಂದಿದ್ದಾರೆ. ಇನ್ನೊಬ್ಬರು ಇಲ್ಲಿವರೆಗೆ ಒಬ್ಬಳನ್ನು ಮದುವೆಯಾಗಲು ಸಾಧ್ಯವಾಗುತ್ತಿಲ್ಲ. ಇನ್ನು, ಈ ವ್ಯಕ್ತಿಗೆ 37 ಮಡಿದಿಯರೇ! ಎಂದು ಆಶ್ಚರ್ಯಪಟ್ಟಿದ್ದಾರೆ. ಈ ವಿಡಿಯೋಗೆ ಅನೇಕ ರೀತಿಯಲ್ಲಿ ತಮಾಷೆಯಾಗಿ ಕಮೆಂಟ್ಗಳು ಬಂದಿದೆ.