ಕರ್ನಾಟಕ

karnataka

ETV Bharat / briefs

ಕೂಲಿ ಹಣ ಕೇಳಿದ್ದಕ್ಕೆ ನಡು ರಸ್ತೆಯಲ್ಲೇ ದಂಪತಿ ಮೇಲೆ ಹಲ್ಲೆ, ಪ್ರಕರಣ ದಾಖಲು - man attacked on couple for asking wage money,

ಕೂಲಿ ಹಣ ಕೇಳಿದ್ದಕ್ಕೆ ನಡು ರಸ್ತೆಯಲ್ಲೇ ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

man attacked on couple, man attacked on couple for asking wage money, man attacked on couple in Chikmagalur, ದಂಪತಿ ಮೇಲೆ ವ್ಯಕ್ತಿ ಹಲ್ಲೆ, ಕೂಲಿ ಹಣ ಕೇಳಿದ್ದಕ್ಕೆ ದಂಪತಿ ಮೇಲೆ ವ್ಯಕ್ತಿ ಹಲ್ಲೆ, ಚಿಕ್ಕಮಗಳೂರಿನಲ್ಲಿ ದಂಪತಿ ಮೇಲೆ ಹಲ್ಲೆ, ದಂಪತಿ ಮೇಲೆ ಹಲ್ಲೆ ಸುದ್ದಿ,
ಕೂಲಿ ಹಣ ಕೇಳಿದ್ದಕ್ಕೆ ನಡು ರಸ್ತೆಯಲ್ಲೇ ದಂಪತಿ ಮೇಲೆ ಹಲ್ಲೆ ಆರೋಪ

By

Published : Jan 9, 2020, 5:03 PM IST

Updated : Jan 9, 2020, 8:03 PM IST

ಚಿಕ್ಕಮಗಳೂರು:ಹಣದ ವಿಚಾರಕ್ಕೆ ನಡು ರಸ್ತೆಯಲ್ಲೇ ಸಂಬಂಧಿಕರು ಹಲ್ಲೆ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡಿರುವ ವೆಂಕಟೇಶ್ - ಸುಧಾ ದಂಪತಿ ತಮ್ಮ ಸಂಬಂಧಿಕರಲ್ಲಿ ಹಣ ಕೇಳಿದ್ದರಂತೆ. ಆಯ್ತು ಬನ್ನಿ ಕೂಲಿ ಕೊಡುವುದಾಗಿ ದಂಪತಿಯನ್ನು ಕರೆಯಿಸಲಾಗಿದ್ದು ಅವರ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಕೂಲಿ ಹಣ ಕೇಳಿದ್ದಕ್ಕೆ ನಡು ರಸ್ತೆಯಲ್ಲೇ ದಂಪತಿ ಮೇಲೆ ಹಲ್ಲೆ ಆರೋಪ

ಹೌಸಿಂಗ್ ಬೋರ್ಡ್‌ನ ಸಾಲು ಮರದಮ್ಮ ದೇವಸ್ಥಾನ ಬಳಿ ಈ ಜಗಳ ನಡೆದಿದ್ದು, ವೆಂಕಟೇಶ ಸಂಬಂಧಿಕ ಧರ್ಮ ಎಂಬಾತ ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ. ಈ ಘಟನೆಯಲ್ಲಿ ಹಲ್ಲೆಗೊಳಗಾದ ವೆಂಕಟೇಶ್ ಹಾಗೂ ಸುಧಾ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಕೂಲಿ ಹಣ ಕೇಳಿದ್ದಕ್ಕೆ ನಡು ರಸ್ತೆಯಲ್ಲೇ ದಂಪತಿ ಮೇಲೆ ಹಲ್ಲೆ ಆರೋಪ

ಕಳೆದ ಕೆಲ ವರ್ಷಗಳಿಂದ ಧರ್ಮ ಅವರ ಹಂದಿ ಫಾರ್ಮ್‌ನಲ್ಲಿ ವೆಂಕಟೇಶ್ ಕೆಲಸ ಮಾಡುತ್ತಿದ್ದರು. ವೆಂಕಟೇಶ್ ಆರು ತಿಂಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ಹಿಂದೆ ಕೆಲಸ ಮಾಡಿದ್ದಕ್ಕೆ ಹಣ ಕೇಳಲು ಹೋದಾಗ ಧರ್ಮ ಹಾಗೂ ಅವರ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ದಂಪತಿ ಆರೋಪಿಸಿದ್ದಾರೆ.

ನಗರ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Last Updated : Jan 9, 2020, 8:03 PM IST

ABOUT THE AUTHOR

...view details