ಕರ್ನಾಟಕ

karnataka

ETV Bharat / briefs

ಅಕ್ರಮ ಗೋ ಸಾಗಣೆ ಆರೋಪ: ಯಾದಗಿರಿಯಲ್ಲಿ ಮೂವರಿಗೆ ಹಿಗ್ಗಾಮುಗ್ಗಾ ಥಳಿತ - Shreram sena

ಯಾದಗಿರಿ ಜಿಲ್ಲೆ ಸುರಪೂರ ತಾಲೂಕಿನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗುಸಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ವಾಹನ ಚಾಲಕ ಸೇರಿದಂತೆ ಮೂವರಿಗೆ ಮನ ಬಂದಂತೆ ಥಳಿಸಿದ್ದಾರೆ.

ಅಕ್ರಮ ಗೋವು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ವಾಹನ ತಡೆದು ಮನಬಂದಂತೆ ತಳಿಸಿದ್ದಾರೆ

By

Published : Jun 5, 2019, 9:53 AM IST

ಯಾದಗಿರಿ:ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ಚಾಲಕ ಸೇರಿದಂತೆ ಮೂವರನ್ನು ಮನಬಂದಂತೆ ಥಳಿಸಿರುವ ಘಟನೆ ಸುರಪುರ ತಾಲೂಕಿನಲ್ಲಿ ಬುಧವಾರ ರಾತ್ರಿ ನಡೆದಿದೆ.

ವಾಹನ ತಡೆದು ಚಾಲಕ ಸೇರಿ ಮೂವರಿಗೆ ಥಳಿತ

10ಕ್ಕೂ ಅಧಿಕ ಗೋವುಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಅನುಮಾನದಿಂದ ವಾಹನ ತಡೆದು ತಪಾಸಣೆ ನಡೆಸಿದಾಗ ನಿಜಾಂಶ ಬಯಲಿಗೆ ಬಂದಿದೆ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಹೇಳಿದ್ದಾರೆ.ಸುರಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details