ಮೈಸೂರು:ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆ ಚೌಕೂರು ವಲಯದಲ್ಲಿ 35 ರಿಂದ 40 ವರ್ಷದ ಸಲಗ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾಗರಹೊಳೆ ಉದ್ಯಾನವನದಲ್ಲಿ ಸಲಗ ಸಾವು
ಅಬ್ಬೂರು ಶಾಖೆಯ ಅನಂತರಾಮು ಎಂಬುವವರ ತೋಟದ ಪಕ್ಕದ ಕೆರೆಯಲ್ಲಿ ಗಾಯಗೊಂಡಿದ್ದ ಸಲಗ ಸಾವನ್ನಪ್ಪಿದ್ದು, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಲಗದ ಶವವನ್ನು ಸುಟ್ಟು ಹಾಕಲಾಯಿತು.
elephant
ಉದ್ಯಾನವನದ ಚನ್ನಂಗಿ ಬೀಟ್ನ ಅಬ್ಬೂರು ಶಾಖೆಯ ಅನಂತರಾಮು ಎಂಬುವವರ ತೋಟದ ಪಕ್ಕದ ಕೆರೆಯಲ್ಲಿ ಗಾಯಗೊಂಡಿದ್ದ ಸಲಗ ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಎಸಿಎಫ್ ಸತೀಶ್, ಉಪ ವಲಯ ಅರಣ್ಯಾಧಿಕಾರಿ ಚನ್ನವೀರೇಶ ಗಾಣಿಗೇರ ಭೇಟಿ ನೀಡಿ ಪರಿಶೀಲಿಸಿದರು.
ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ ಸಹಾಯದಿಂದ ಸಲಗದ ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಸ್ಥಳದಲ್ಲೇ ಸಲಗದ ಶವವನ್ನು ಸುಟ್ಟು ಹಾಕಲಾಯಿತು.