ಕರ್ನಾಟಕ

karnataka

ETV Bharat / briefs

ಹೂತಿಟ್ಟ ಶವ ಹೊರ ತೆಗೆದು ಕುಟುಂಬಕ್ಕೆ ಹಸ್ತಾಂತರ - unknown corpse

ಕಾರವಾರದ ಭಟ್ಕಳ ತಾಲೂಕಿನ ಮುರುಡೇಶ್ವರದ ಮಾವಳ್ಳಿಯಲ್ಲಿ ಈಚೆಗೆ ಸಹಜ ಸ್ಥಿತಿಯಲ್ಲಿ ಮೃತಪಟ್ಟಿದ್ದ ಅಪರಿಚಿತ ಶವದ ಗುರುತು ಪತ್ತೆ ಹಚ್ಚಲಾಗಿದ್ದು, ಹುಬ್ಬಳ್ಳಿ ತಾಲೂಕಿನ ಶಿಗಿಗಟ್ಟಿ ನಿವಾಸಿ ನೀಲಪ್ಪ ಲಮಾಣಿ ಎಂದು ಗುರುತಿಸಲಾಗಿದೆ.

ಅಪರಿಚಿತ ಶವದ ಗುರುತು ಪತ್ತೆ

By

Published : Jun 4, 2019, 12:09 PM IST

ಕಾರವಾರ: ಇಲ್ಲಿನ ಭಟ್ಕಳ ತಾಲೂಕಿನ ಮುರುಡೇಶ್ವರ ಮಾವಳ್ಳಿ ಪಂಚಾಯ್ತಿ ವ್ಯಾಪ್ತಿಯ ಜನತಾ ಕಾಲೊನಿಯ ಗೇರು ಪ್ಲಾಂಟೇಶನ ಬಳಿ ಸಹಜ ಸ್ಥಿತಿಯಲ್ಲಿ ಮೃತಪಟ್ಟಿದ್ದ ಅಪರಿಚಿತ ವ್ಯಕ್ತಿಯ ಶವದ ಗುರುತು ಪತ್ತೆಯಾಗಿದೆ.

ಅಪರಿಚಿತ ವ್ಯಕ್ತಿಯ ಶವದ ಗುರುತು ಪತ್ತೆ

ಮೃತ ವ್ಯಕ್ತಿಯನ್ನು ಹುಬ್ಬಳ್ಳಿ ಕಲಘಟಗಿಯ ಶಿಗಿಗಟ್ಟಿಯ ನೀಲಪ್ಪ ಲೋಕಪ್ಪ ಲಮಾಣಿ(50) ಎಂದು ಗುರುತಿಸಲಾಗಿದೆ. ಮೃತದೇಹವನ್ನು ತಹಶೀಲ್ದಾರರ ಸಮ್ಮುಖದಲ್ಲಿ ರುದ್ರಭೂಮಿಯಿಂದ ಹೊರತೆಗೆಯಲಾಗಿದೆ. ಮೃತ ವ್ಯಕ್ತಿ ಧರಿಸಿದ್ದ ಬಟ್ಟೆ ಮೂಲಕ ಆತನ ಪತ್ನಿ ನೀಲವ್ವ ಲಮಾಣಿ ಗುರುತು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಬಳಿಕ ಶವವನ್ನು ಹಸ್ತಾಂತರಿಸಲಾಗಿದೆ.

ಮೇ 25ರಂದು ಪತ್ತೆಯಾಗಿದ್ದ ಮೃತದೇಹದ ಬಗ್ಗೆ ಸ್ಥಳೀಯ ಜನತಾ ಕಾಲೊನಿಯ ನಿವಾಸಿ ವಿನೋದ ತುಕಾರಾಮ ನಾಯ್ಕ ಎನ್ನುವವರು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ಆರಂಭಿಸಿದ ಹೆಡ್ ಕಾನ್ಸ್​ಟೇಬಲ್ ಮಧುಕರ ನಾಯ್ಕ ಹಾಗೂ ಸಿಬ್ಬಂದಿ ಮೃತದೇಹದ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details