ಮುಂಬೈ: 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 11ನೇ ವಿಶ್ವಕಪ್ನಲ್ಲಿ ಅವಕಾಶ ನೀಡಿದ್ದ 15 ಆಟಗಾರರಲ್ಲಿ 7 ಆಟಗಾರರಿಗೆ ಮತ್ತೆ 2019 ರ ವಿಶ್ವಕಪ್ನಲ್ಲಿ ಆಡುವ ಅವಕಾಶವನ್ನು ಬಿಸಿಸಿಐ ಕಲ್ಪಿಪಿಸಿದೆ.
2015ರ ವಿಶ್ವಕಪ್ನಲ್ಲಿ ಧೋನಿ ನೇತೃತ್ವದಲ್ಲಿ ಅಶ್ವಿನ್, ಕೊಹ್ಲಿ, ಧವನ್, ರೋಹಿತ್, ಜಡೇಜಾ, ಭುವನೇಶ್ವರ್, ಅಕ್ಷರ್ ಪಟೇಲ್,ರಹಾನೆ, ಸುರೇಶ್, ರೈನಾ, ರಾಯುಡು, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಉಮೇಶ್ ಯಾದವ್ ಹಾಗೂ ಸ್ಟುವರ್ಟ್ ಬಿನ್ನಿಯವರನ್ನು ವಿಶ್ವಕಪ್ಗೆ ಆಯ್ಕೆ ಮಾಡಲಾಗಿತ್ತು.
ಈ ಬಾರಿ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದು, ರೋಹಿತ್ ಶರ್ಮಾ ಉಪನಾಯಕನಾಗಿದ್ದಾರೆ. ಇವರ ಜೊತೆಗೆ ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ,ಶಿಖರ್ ಧವನ್ ಹಾಗೂ ರವೀಂದ್ರ ಜಡೇಜಾ ಮರು ಆಯ್ಕೆಯಾಗಿದ್ದಾರೆ.