ಕರ್ನಾಟಕ

karnataka

ETV Bharat / briefs

UPA ಅವಧಿಯಲ್ಲಿ 6 ಸರ್ಜಿಕಲ್​ ಸ್ಟ್ರೈಕ್​​! ದಿನಾಂಕ ಸಹಿತ ಮಾಹಿತಿ ನೀಡಿದ ರಾಜೀವ್​ ಶುಕ್ಲಾ - ಮನಮೋಹನ್​ ಸಿಂಗ್​

ಕಾಂಗ್ರೆಸ್​ ಆಡಳಿತಾವಧಿಯಲ್ಲೂ ಕೂಡ ಸರ್ಜಿಕಲ್​ ಸ್ಟ್ರೈಕ್​ ನಡೆದಿದೆ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್​ ಇದೀಗ ದಿನಾಂಕ ಸಹಿತ ಮಾಹಿತಿ ನೀಡಿದೆ.

ರಾಜೀವ್​ ಶುಕ್ಲಾ

By

Published : May 2, 2019, 6:43 PM IST

ನವದೆಹಲಿ:ಯುಪಿಎ ಸರ್ಕಾರದ ಅವಧಿಯಲ್ಲೂ ಸರ್ಜಿಕಲ್​ ಸ್ಟ್ರೈಕ್​ ನಡೆದಿದೆ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷ​, ಇದೀಗ ದಿನಾಂಕ ಸಹಿತ ಮಾಹಿತಿ ನೀಡಿ, ಆಡಳಿತ ಪಕ್ಷ ಬಿಜೆಪಿಗೆ ತಿರುಗೇಟು​ ನೀಡಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿರುವ ಕಾಂಗ್ರೆಸ್​ ಮುಖಂಡ ರಾಜೀವ್​ ಶುಕ್ಲಾ, ಮನಮೋಹನ್​ ಸಿಂಗ್​ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ ಆರು ಸಲ ಈ ರೀತಿಯ ದಾಳಿ ನಡೆಸಲಾಗಿದೆ ಎಂದರು.

ಮೊದಲ ಸರ್ಜಿಕಲ್​ ಸ್ಟ್ರೈಕ್​ ಜನವರಿ 6, 2013 ಸವನ್​ ಪಾತ್ರಾ ಚಕ್​ಪೋಸ್ಟ್​, 2013 ರ ಜುಲೈ 27 ಮತ್ತು 28ರಂದು ನಜಾಫೀರ್​ ಸೆಕ್ಟರ್​ ಹಾಗೂ ಆಗಸ್ಟ್​ 6, 2013 ರಂದು ನಿಲಂ ವ್ಯಾಲಿ ಮತ್ತು 2014 ರ ಜನವರಿ 14 ರಂದು ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದೇವೆ. ಯುಪಿಎ ಆಡಳಿತಾವಧಿಯಲ್ಲಿ ಹೀಗೆ ಒಟ್ಟು ಆರು ಬಾರಿ ಸರ್ಜಿಕಲ್​ ಸ್ಟ್ರೈಕ್‌ಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಇದೇ ವೇಳೆ ಜೂನ್​ 19, 2008 ರಂದು ಬಟಲ್​ ಸೆಕ್ಟರ್​​ನಲ್ಲೂ, ಆಗಸ್ಟ್​ 30 ಹಾಗೂ ಸೆ.1, 2011 ರಲ್ಲಿ ಶಾರದಾ ಸೆಕ್ಟರ್​ನಲ್ಲೂ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details