ಹೈದರಾಬಾದ್: ಎಸ್ಆರ್ಹೆಚ್ ಹಾಗೂ ಕೆಕೆಆರ್ ಪಂದ್ಯ ವೀಕ್ಷಣೆ ವೇಳೆ ಕ್ರಿಕೆಟ್ ಅಭಿಮಾನಿಯೊಬ್ಬನಿಗೆ ಪಂದ್ಯ ವೀಕ್ಷಣೆ ಮಾಡಲು ಅಡಚಣೆ ಮಾಡಿ, ಬೆದರಿಕೆಯೊಡ್ಡಿದ ಆರೋಪದ ಮೇಲೆ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಹೈದರಾಬಾದ್ ಉಪ್ಪಾಳದ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಕೋಲ್ಕತಾ ನೈಟ್‌ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಪಂದ್ಯದಲ್ಲಿ ಅಭಿಮಾನಿಯೊಬ್ಬನಿಗೆ ಪಂದ್ಯ ವೀಕ್ಷಣೆ ಅಡಚಣೆ ಮಾಡಿದ್ದಕ್ಕೆ ತೆಲುಗು ಟಿವಿ ನಟಿ ಪ್ರಶಾಂತಿ ಸೇರಿದಂತೆ 5 ಮಂದಿ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.