ಕರ್ನಾಟಕ

karnataka

ETV Bharat / briefs

ಸೋಂಕಿತ ವೈದ್ಯರ ಸಂಪರ್ಕಕ್ಕೆ ಬಂದ 6 ಪಿಎಸ್‌ಐಗಳು ನಿರಾಳ.. 42 ಸಿಬ್ಬಂದಿ ಕ್ವಾರಂಟೈನ್ - ಕೊರೊನಾ ವೈರಸ್

ಹೈದ್ರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಚಿಟ್ಟಗುಪ್ಪ ತಾಲೂಕಿನ ಭಂಗೂರ್ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರತ ವೈದ್ಯರಲ್ಲಿ ಸೋಂಕು ಪತ್ತೆಯಾಗಿದೆ.

 6 corona suspect police report negative in bidar
6 corona suspect police report negative in bidar

By

Published : Jun 20, 2020, 4:25 PM IST

ಬೀದರ್ :ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರತ ಖೇಣಿ ರಂಜೋಳ ಆರೋಗ್ಯ ಕೇಂದ್ರದ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 6 ಜನ ಸಬ್ ಇನ್ಸ್‌ಪೆಕ್ಟರ್‌ಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದರಿಂದ ಅವರೀಗ ನಿರಾಳರಾಗಿದ್ದಾರೆ.

ಹೈದ್ರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಚಿಟ್ಟಗುಪ್ಪ ತಾಲೂಕಿನ ಭಂಗೂರ್ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರತ ವೈದ್ಯರಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಜನವಾಡ, ಮನ್ನಳ್ಳಿ, ಬಗದಲ್, ಗ್ರಾಮೀಣ ಠಾಣೆ ಪಿಎಸ್‌ಐಗಳು ಸೇರಿ 42 ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಈ ಪೈಕಿ 6 ಜನ ಪಿಎಸ್‌ಐಗಳ ವರದಿ ನೆಗೆಟಿವ್ ಬಂದಿದೆ.

ಉಳಿದ 6 ಜನ ಎಎಸ್‌ಐಗಳು, 23 ಜನ ಕಾನ್‌ಸ್ಟೆಬಲ್‌ಗಳು ಹಾಗೂ 13 ಜನ ಹೋಂ ಗಾರ್ಡ್ ಸಿಬ್ಬಂದಿ ವರದಿ ಬರೋದು ಇನ್ನೂ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details