ಮಂಗಳೂರು: ನಗರದಲ್ಲಿ ಹಸಿಕಸ ಮತ್ತು ಒಣಕಸ ವಿಂಗಡಿಸಿ ಪೌರಕಾರ್ಮಿಕರು ಕಸ ಸಂಗ್ರಹಣೆಗೆ ಬಂದಾಗ ಅವರಿಗೆ ನೀಡಬೇಕೆಂಬ ನಿಯಮವಿದೆ. ಇದರಿಂದ ಕಸ ನಿರ್ವಹಣೆಗೆ ಅನುಕೂಲ ಆಗಲಿದೆ ಎಂದು ಈ ನಿಯಮ ಮೊದಲಿನಿಂದಲೂ ಜಾರಿಯಲ್ಲಿದೆ. ಪಾಲಿಕೆ ಆದೇಶ ಉಲ್ಲಂಘಿಸಿದ ಅಪಾರ್ಟ್ಮೆಂಟ್ವೊಂದಕ್ಕೆ 53 ಸಾವಿರ ರೂ. ದಂಡ ವಿಧಿಸಲಾಗಿದೆ.
ಹಸಿಕಸ, ಒಣಕಸ ಬೇರ್ಪಡಿಸದ ಮಂಗಳೂರಿನ ಅಪಾರ್ಟ್ಮೆಂಟ್ಗೆ 53 ಸಾವಿರ ರೂ. ದಂಡ! - Mars and Venus Apartment in Chilimbi, Mangalore
ಮಂಗಳೂರಿನ ಚಿಲಿಂಬಿಯಲ್ಲಿರುವ ಮಾರ್ಸ್ ಆಂಡ್ ವೇನಸ್ ಅಪಾರ್ಟ್ಮೆಂಟ್ ನಲ್ಲಿ ಕೂಡ ಕಸ ವಿಂಗಡನೆ ಮಾಡದೆ ನೀಡಿರುವುದಕ್ಕೆ ಮಹಾನಗರ ಪಾಲಿಕೆಯು ಸರಿಯಾಗಿ ಬುದ್ಧಿ ಕಲಿಸಿದೆ. 53 ಸಾವಿರ ದಂಡ ವಿಧಿಸಿದೆ.
![ಹಸಿಕಸ, ಒಣಕಸ ಬೇರ್ಪಡಿಸದ ಮಂಗಳೂರಿನ ಅಪಾರ್ಟ್ಮೆಂಟ್ಗೆ 53 ಸಾವಿರ ರೂ. ದಂಡ! 53 thousand fine for apartment in mangalore](https://etvbharatimages.akamaized.net/etvbharat/prod-images/768-512-12047305-thumbnail-3x2-mng.jpg)
ಮಂಗಳೂರು ಮಹಾನಗರ ಪಾಲಿಕೆಯು ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಕ್ಕೆ ಬರುವ ಪೌರ ಕಾರ್ಮಿಕರಿಗೆ ಹಸಿ ಕಸ, ಒಣ ಕಸ ವಿಂಗಡಿಸಿ ನೀಡಬೇಕೆಂದು ಸೂಚನೆ ನೀಡಿದೆ. ಆದರೆ, ಆದರೆ ಹಲವೆಡೆ ಇದನ್ನು ವಿಂಗಡಿಸಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಚಿಲಿಂಬಿಯಲ್ಲಿರುವ ಮಾರ್ಸ್ ಆಂಡ್ ವೇನಸ್ ಅಪಾರ್ಟ್ಮೆಂಟ್ನಲ್ಲಿ ಕೂಡ ಕಸ ವಿಂಗಡನೆ ಮಾಡದೆ ನೀಡದಿರುವುದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು 53 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಈ ಅಪಾರ್ಟ್ಮೆಂಟ್ ನಲ್ಲಿ 106 ಫ್ಲ್ಯಾಟ್ ಗಳಿದ್ದು ಪ್ರತಿ ಫ್ಲ್ಯಾಟ್ ಗೆ 500 ರಂತೆ ಒಟ್ಟು 53 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಅಪಾರ್ಟ್ಮೆಂಟ್ಗೆನ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.