ರಾಯಚೂರು: ಇಲ್ಲಿನ ರಿಮ್ಸ್ ಆಸ್ಪತ್ರೆಗೆ ಇಂದು 50 ವೆಂಟಿಲೇಟರ್ಗಳನ್ನು ಸರಬರಾಜು ಮಾಡಲಾಗಿದೆ ಎಂದು ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.
ರಿಮ್ಸ್ ಆಸ್ಪತ್ರೆಗೆ ಪಿಎಂ ಕೇರ್ ಫಂಡ್‌ನಿಂದ 50 ವೆಂಟಿಲೇಟರ್ ಪೂರೈಕೆ - 50 ventilators supplied to Raichur RIMS Hospital
ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಪಿಎಂ ಕೇರ್ ಫಂಡ್‌ನಿಂದ 50 ವೆಂಟಿಲೇಟರ್ಗಳನ್ನು ಸರಬರಾಜು ಮಾಡಲಾಗಿದೆ. ಈ ಬಗ್ಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ರಿಮ್ಸ್ ಆಸ್ಪತ್ರೆಗೆ ಪಿಎಂ ಕೇರ್ ಫಂಡ್‌ನಿಂದ ಸರಬರಾಜು ಮಾಡಿದ 50 ವೆಂಟಿಲೇಟರ್ಗಳನ್ನು ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
50 ವೆಂಟಿಲೇಟರ್ ಸರಬರಾಜು ಮಾಡಲಾಗಿದೆ. 25 ಮೊಬೈಲ್ ವೆಂಟಿಲೇಟರ್ ಹಾಗೂ 25ಆತ್ಯಾಧುನಿಕ ವೆಂಟಿಲೇಟರ್ಗಳನ್ನ ಸರ್ಕಾರದಿಂದ ಕಳುಹಿಸಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪಗೆ ಜಿಲ್ಲೆಗೆ 50 ವೆಂಟಿಲೇಟರ್ ಅಗತ್ಯವಿದೆ ಎಂಬ ಬೇಡಿಕೆ ಸಲ್ಲಿಸಲಾಗಿತ್ತು. ಬೇಡಿಕೆಗೆ ಅನುಗುಣವಾಗಿ ಪಿಎಂ ಕೇರ್ ಫಂಡ್‌ನಿಂದ ವೆಂಟಿಲೇಟರ್ ನೀಡಲಾಗಿದೆ. ಸದ್ಯ 29 ವೆಂಟಿಲೇಟರ್ ಬೆಡ್‌ಗಳು ಕಾರ್ಯನಿರ್ವಹಿಸುತ್ತಿದೆ. ಈ 50 ಸೇರಿದರೆ 120 ಬೆಡ್‌ಗಳು ಲಭ್ಯವಾಗಲಿದೆ. ಚಿಕಿತ್ಸೆಗೆ ಬರುವ ರೋಗಿಗಳಿಗೆ ಅನುಕೂಲವಾಗಿದೆ. ಇಂದು ಬಂದಿರುವಂತೆ ವೆಂಟಿಲೇಟರ್ಗಳನ್ನು ಶೀಘ್ರದಲ್ಲಿ ಆಳವಡಿಸುವ ಮೂಲಕ ಚಿಕಿತ್ಸೆಗೆ ಅನುಕೂಲ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.