ಕೋವಿಡ್‍ನಿಂದ ಬಾಲಕಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ: 4 ಹೊಸ ಪ್ರಕರಣ ಪತ್ತೆ - ಕೊರೊನಾ ವೈರಸ್
ಬಾಗಲಕೋಟೆ ಜಿಲ್ಲೆಯಲ್ಲಿಂದು 4 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಮಹಾ ಸೋಂಕು ಜಿಲ್ಲೆಯನ್ನಾವರಿಸಿದೆ.
![ಕೋವಿಡ್‍ನಿಂದ ಬಾಲಕಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ: 4 ಹೊಸ ಪ್ರಕರಣ ಪತ್ತೆ 4 new Corona cases found in bagalakote](https://etvbharatimages.akamaized.net/etvbharat/prod-images/768-512-08:13-kn-bgk-01-covida-av-script-7202182-14062020201138-1406f-1592145698-589.jpg)
ಬಾಗಲಕೋಟೆ:ಜಿಲ್ಲೆಯಲ್ಲಿಂದು 4 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಬಾಲಕಿ ಗುಣಮುಖಳಾಗಿದ್ದಾಳೆ.
ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದ 26 ವರ್ಷದ ಯುವಕ ರೋಗಿ-6828, ಗುಳೇದಗುಡ್ಡದ 54 ವರ್ಷದ ಮಹಿಳೆ ರೋಗಿ-6829, 28 ವರ್ಷದ ಯುವತಿ ಪಿ-6830, ರಬಕವಿಯ 25 ವರ್ಷದ ಪುರುಷ ರೋಗಿ-6831, ಒಬ್ಬ ಆಂಧ್ರಪ್ರದೇಶದಿಂದ ಬಂದ ರೋಗಿ- 6828 ಮತ್ತು ಉಳಿದ ಮೂವರೂ ಮಹಾರಾಷ್ಟ್ರದಿಂದ ಮರಳಿದ ರೋಗಿ-6829, ರೋಗಿ-6830, ರೋಗಿ-6831 ರೋಗಿಗಳಾಗಿದ್ದಾರೆ.
ಜಿಲ್ಲೆಯಿಂದ ಕಳುಹಿಸಲಾದ 157 ಸ್ಯಾಂಪಲ್‍ಗಳ ಪೈಕಿ 141 ಸ್ಯಾಂಪಲ್‍ಗಳ ವರದಿ ನೆಗಟಿವ್, 4 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಇನ್ನು 12 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 641 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ.
ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 9367 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 9207 ನೆಗಟಿವ್ ಪ್ರಕರಣ, 104 ಪಾಸಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿದೆ.
ಕೋವಿಡ್-19 ದಿಂದ ಒಟ್ಟು 89 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 14 ಸೋಂಕಿತ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. 14 ದಿನಗಳ ಕಾಲ ಕ್ವಾಂರಂಟೈನ್‍ನಲ್ಲಿದ್ದ 3207 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್‍ನಿಂದ ಓರ್ವ ಬಾಲಕಿ ಗುಣಮುಖರೋಗಿ-4535 ಕೋವಿಡ್‍ವಿಂದ ಗುಣಮುಖರಾಗಿದ್ದು, ಜಿಲ್ಲಾ ಆಸ್ಪತ್ರೆಯಿಂದ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು.