ವಿಜಯಪುರ:ತಾಲೂಕಿನ ಉತ್ನಾಳ ಎಲ್ಟಿ ತಾಂಡಾ 2ದಲ್ಲಿ 35 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಮಾಹಿತಿ ಪಡೆದ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಗ್ರಾಮಕ್ಕೆ ಭೇಟಿ ನೀಡಿ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಒಂದೇ ಗ್ರಾಮದಲ್ಲಿ 35 ಜನರಿಗೆ ಸೋಂಕು: ಅಧಿಕಾರಿಗಳ ಭೇಟಿ, ಪರಿಶೀಲನೆ - Vijayapura Corona
ಉತ್ನಾಳ ತಾಂಡ 2ರಲ್ಲಿ ಒಟ್ಟು 35 ಜನರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಉಪವಿಭಾಗಾಧಿಕಾರಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
![ಒಂದೇ ಗ್ರಾಮದಲ್ಲಿ 35 ಜನರಿಗೆ ಸೋಂಕು: ಅಧಿಕಾರಿಗಳ ಭೇಟಿ, ಪರಿಶೀಲನೆ ಅಧಿಕಾರಿಗಳ ಭೇಟಿ](https://etvbharatimages.akamaized.net/etvbharat/prod-images/768-512-08:40:27:1621955427-kn-vjp-06-one-villge-35ve-av-7202140-25052021203816-2505f-1621955296-1082.jpg)
ಅಧಿಕಾರಿಗಳ ಭೇಟಿ
ಕೊರೊನಾ ಸೋಂಕಿತ ಕುಟುಂಬಸ್ಥರನ್ನು ಭೇಟಿ ಮಾಡಿ, ಕೊರೊನಾ ಸೋಂಕಿತರು ಪ್ರತ್ಯೇಕವಾಗಿ ವಾಸಿಸಲು ತಿಳಿಸಿದ್ದಾರೆ. ಉತ್ನಾಳ ತಾಂಡ 2ರಲ್ಲಿ ಒಟ್ಟು 35 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಪ್ರತ್ಯೇಕ ಕೋಣೆ ಇರದೇ ಇದ್ದಲ್ಲಿ ಗ್ರಾಮದಲ್ಲಿರುವ ಶಾಲೆಯಲ್ಲಿ ವಾಸವಿರುವಂತೆ ತಿಳಿಸಿದ್ದಾರೆ. ವೈದ್ಯರು ನೀಡಿದ ಮಾತ್ರೆಗಳನ್ನು ತಪ್ಪದೇ ಸೇವಿಸುವಂತೆ ಮತ್ತು ಆರೋಗ್ಯದಲ್ಲಿ ಏರುಪೇರು ಆದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.