ಕರ್ನಾಟಕ

karnataka

ETV Bharat / briefs

ಮಿಷನ್​ 333: 2024ರ ಮಹಾಸಮರಕ್ಕೆ ಈಗಿನಿಂದಲೇ ಬಿಜೆಪಿ ಭರದ ಸಿದ್ಧತೆ! - ಪ್ಲಾನ್​

ನರೇಂದ್ರ ಮೋದಿ ನೇತೃತ್ವದಲ್ಲಿ ಈ ಬಾರಿ ಚುನಾವಣೆ ಎದುರಿಸಿರುವ ಬಿಜೆಪಿ ಬರೋಬ್ಬರಿ 303 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದು, ಮುಂದಿನ ಸಂಸತ್‌ ಚುನಾವಣೆಗೂ ಈಗಿನಿಂದಲೇ ಯೋಜನೆ ರೂಪಿಸುತ್ತಿದೆ.

ಬಿಜೆಪಿ

By

Published : May 28, 2019, 1:20 PM IST

Updated : May 28, 2019, 1:31 PM IST

ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಪಡೆದಿರುವ ಭಾರತೀಯ ಜನತಾ ಪಾರ್ಟಿ,ಇದೀಗ 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಈಗಿನಿಂದಲೇ ಮಾಸ್ಟರ್​ ಪ್ಲಾನ್‌ ರೂಪಿಸುತ್ತಿದೆ.

ಈ ಸಲದ ಚುನಾವಣೆಯಲ್ಲಿ 303 ಸೀಟ್​ ಗೆದ್ದಿರುವ ಬಿಜೆಪಿ 2024ರ ಲೋಕಸಭೆಯಲ್ಲಿ 333 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡುವ ಮಹತ್ವಾಕಾಂಕ್ಷೆಇಟ್ಟುಕೊಂಡಿದೆ. ಆಂಧ್ರಪ್ರದೇಶ,ತ್ರಿಪುರಾ ಬಿಜೆಪಿ ಪಕ್ಷದ ಸೆಕ್ರೆಟರಿ ಸುನೀಲ್ ದೇವ್​ಧರ್​ ತಿಳಿಸಿರುವ ಪ್ರಕಾರ, 2014ರಲ್ಲಿ 282 ಕ್ಷೇತ್ರ, 2019ರಲ್ಲಿ 303 ಮುಂದಿನ ಚುನಾವಣೆಯಲ್ಲಿ 333 ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಿಂದ ತಮಿಳುನಾಡಿನವರೆಗೂ ಅಂದರೆ, ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು ಗೆಲುವು ದಾಖಲು ಮಾಡಲು ಪ್ಲಾನ್‌ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ 25 ಕ್ಷೇತ್ರ ಹಾಗೂ ತೆಲಂಗಾಣದಲ್ಲಿ 4 ಸ್ಥಾನ ಗೆದ್ದಿರುವ ಬಿಜೆಪಿ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ಖಾತೆ ತೆರೆದಿಲ್ಲ. ಈ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.

Last Updated : May 28, 2019, 1:31 PM IST

ABOUT THE AUTHOR

...view details