ಕರ್ನಾಟಕ

karnataka

ETV Bharat / briefs

ದಕ್ಷಿಣ ಕನ್ನಡ ಜಿಲ್ಲೆಗೆ ಸೌದಿ ಶಾಕ್: ಇಂದು 30 ಮಂದಿಯಲ್ಲಿ ಕೊರೊನಾ ದೃಢ - Dakshina kannada corona updatespfda

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ಮಂದಿಗೆ ಕೊರೊನಾ ತಗುಲಿದೆ. ಈ ಮೂಲಕ‌ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ.

Dakshina kannada
Dakshina kannada

By

Published : Jun 13, 2020, 7:32 PM IST

ಮಂಗಳೂರು:ಜಿಲ್ಲೆಯ ಜನರನ್ನು ಕೊರೊನಾ ಬೆಂಬಿಡದಂತೆ ಕಾಡುತ್ತಿದ್ದು, ಇಂದು ಆರು ಮಕ್ಕಳು ಸೇರಿದಂತೆ 30 ಮಂದಿಗೆ ಸೋಂಕು ತಗುಲಿದೆ.

ಸೌದಿ ಅರೇಬಿಯಾದಿಂದ ಜಿಲ್ಲೆಗೆ ಬಂದ 25 ಮಂದಿಗೆ ಮತ್ತು ಮಹಾರಾಷ್ಟ್ರದಿಂದ ಬಂದ ಐದು ಮಂದಿಗೆ ಕೊರೊನಾ ದೃಢಪಟ್ಟಿದೆ. ಈ 30 ಮಂದಿಯಲ್ಲಿ 1 ವರ್ಷದ ಮೂರು ಮಕ್ಕಳು ಮತ್ತು 2, 4, 8 ವರ್ಷದ ಮಕ್ಕಳು ಸೇರಿದಂತೆ ಮಹಿಳೆಯರು ಮತ್ತು ಪುರುಷರಿಗೆ ಸೋಂಕು ತಗುಲಿದೆ. ಇವರೆಲ್ಲರೂ ಕ್ವಾರಂಟೈನ್​​ನಲ್ಲಿದ್ದರು ಎನ್ನಲಾಗುತ್ತಿದೆ.

ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details