ಕರ್ನಾಟಕ

karnataka

ETV Bharat / briefs

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 3 ಕೊರೊನಾ ಕೇಸ್​ ಪತ್ತೆ - Corona virus

ಮಹಾರಾಷ್ಟ್ರದ ಕೊರೊನಾ ನಂಟು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂದುವರೆದಿದೆ. ಇಂದು ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 148ಕ್ಕೆ ಏರಿಕೆಯಾಗಿದೆ.

3 more corona cases found in chikkaballapura
3 more corona cases found in chikkaballapura

By

Published : Jun 5, 2020, 7:22 PM IST

ಚಿಕ್ಕಬಳ್ಳಾಪುರ: ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸಾಗಿರುವ ವಲಸೆ ಕಾರ್ಮಿಕರಲ್ಲಿ ಇಂದು ಮತ್ತೆ ಮೂವರಿಗೆ ಸೋಂಕು ದೃಢಪಟ್ಟಿದೆ.

30 ವರ್ಷದ ಮಹಿಳೆ, 70 ವರ್ಷದ ವೃದ್ಧ, 55 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಸದ್ಯ ಜಿಲ್ಲೆಯಲ್ಲಿ‌ ಸೋಂಕಿತರ ಸಂಖ್ಯೆ 148ಕ್ಕೆ ಏರಿಕೆಯಾಗಿದ್ದು, 55 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 90 ಜನ ಸೋಂಕಿತರು ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ABOUT THE AUTHOR

...view details