ಮೊರೆನಾ(ಮಧ್ಯಪ್ರದೇಶ):ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿನ ಆಕ್ಸಿಜನ್ ಟ್ಯಾಂಕ್ ಒಣಗಿದ ನಂತರ ಸಿಬ್ಬಂದಿ ಆಮ್ಲಜನಕ ಪೂರೈಕೆಯನ್ನು ಬದಲಾಯಿಸಲು ವಿಳಂಬ ಮಾಡಿದ ಕಾರಣ ಜಿಲ್ಲಾ ಆಸ್ಪತ್ರೆಯಲ್ಲಿ ಮೂವರು ಕೋವಿಡ್ ರೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಮ್ಲಜನಕದ ಪೂರೈಕೆಯನ್ನು 20 ನಿಮಿಷಗಳ ಕಾಲ ಕಡಿತಗೊಳಿಸಿದ್ದೇ, ಮೂರು ರೋಗಿಗಳ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಸರಬರಾಜನ್ನು ಬದಲಾಯಿಸಲು ಯಾವುದೇ ಸಿಬ್ಬಂದಿ ಇರದ ಕಾರಣ ಮೂರು ಜನ ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಮಧ್ಯಪ್ರದೇಶವು ಈಗಾಗಲೇ ಆಮ್ಲಜನಕದ ಕೊರತೆ, ರೆಮಿಡಿಸಿವಿರ್ ಚುಚ್ಚುಮದ್ದು ಮತ್ತು ಹಾಸಿಗೆಗಳ ಅಲಭ್ಯತೆಯೊಂದಿಗೆ ಹೋರಾಡುತ್ತಿದೆ. ಕೋವಿಡ್ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ. ಆದಾಗ್ಯೂ, ಮೊರೆನಾದಲ್ಲಿ, ಆಸ್ಪತ್ರೆಯ ಆಡಳಿತದ ನಿರ್ಲಕ್ಷ್ಯದಿಂದಾಗಿ ರೋಗಿಗಳು ಸಾವನ್ನಪ್ಪಿದ್ದಾರೆ.