ಕೋಲ್ಕತ್ತಾ: ಲೋಕಸಭಾ ಚುನಾವಣೆ ಮುಕ್ತಾಯವಾಗಿ ಎರಡು ದಿನಗಳಾಗಿದ್ದು ಪಶ್ಚಿಮ ಬಂಗಾಳದಲ್ಲಿ ಮತ್ತೆ ಗಲಾಟೆ ನಡೆದಿದೆ.
ಎಲ್ಲ ಹಂತದ ಮತದಾನದ ವೇಳೆಯೂ ಸಾಕಷ್ಟು ಹಿಂಸಾಚಾರದಿಂದ ಸುದ್ದಿಯಾಗಿದ್ದ ದೀದಿ ನಾಡಲ್ಲಿ ಸೋಮವಾರ ತಡರಾತ್ರಿ ಕೂಚ್ ಬೆಹಾರ್ನ ಸಿತೈನಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.