ಕರ್ನಾಟಕ

karnataka

ETV Bharat / briefs

ಮದ್ಯದ ಬಾಟಲಿಗಾಗಿ ಕೊಲೆ ಮಾಡಿದ್ದ ಮೂವರು ಆರೋಪಿಗಳ ಬಂಧನ - ಬೆಂಗಳೂರು

ಕೇವಲ ಮದ್ಯಕ್ಕಾಗಿ ಒಬ್ಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಪುಲಿಕೇಶಿ ನಗರದ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಬಂಧನ

By

Published : Apr 11, 2019, 4:40 AM IST

Updated : Apr 11, 2019, 6:17 AM IST

ಬೆಂಗಳೂರು: ಮದ್ಯ ಇರುವ ಬಾಟಲ್‍ಗಾಗಿ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಯುವಕರನ್ನು ಪುಲಿಕೇಶಿನಗರ ಪೊಲೀಸರು ಇಂದು ಬಂಧಿಸಿದ್ದಾರೆ.


ಪುಲಿಕೇಶಿನಗರ ಸತ್ಯಶೀಲನ್ ಎಂಬುವವನೆ ಕೊಲೆಯಾಗಿದ್ದ ವ್ಯಕ್ತಿ. ಸೆಲ್ವರಾಜ್ ತುಳಸಿರಾಮ, ಲೋಕೇಶ್ ಹಾಗೂ ಸುನೀಲ್ ಕುಮಾರ್ ಬಂಧಿತ ಯುವಕರು.

ಆಗಿದ್ದೇನು?:


ನಗರದ ಬಾಣಸವಾಡಿಯ ಹೋಟೆಲ್ ಬಳಿ ಮಾರ್ಚ್ 25ರಂದು ರಾತ್ರಿ ಸತ್ಯಶೀಲನ್ ಕೈಯಲ್ಲಿ ಮದ್ಯದ ಬಾಟಲ್ ಹಿಡಿದುಕೊಂಡು ಹೋಗುತ್ತಿದ್ದ. ಈ ವೇಳೆ ಲೋಕೇಶ್, ಸೆಲ್ವರಾಜ್ ಹಾಗೂ ಸುನೀಲ್ ಮದ್ಯಕ್ಕಾಗಿ ಹುಡುಕಾಡುತ್ತಿದ್ದರು. ಸತ್ಯಶೀಲನ್ ಕೈಯಲ್ಲಿದ್ದ ಮದ್ಯದ ಬಾಟಲ್ ನೋಡಿದ ಯುವಕರು, ಮೊದಲಿಗೆ ಮದ್ಯ ಕೊಡುವಂತೆ ಕೇಳಿದ್ದಾರೆ. ಆದರೆ ಸತ್ಯಶೀಲನ್ ಮದ್ಯ ಬಾಟಲ್ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಯುವಕರು ಚಾಕುವಿನಿಂದ ಇರಿದು, ಬಾಟಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಪುಲಿಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರೋಪಿಗಳನ್ನು ಬುಧವಾರ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Last Updated : Apr 11, 2019, 6:17 AM IST

ABOUT THE AUTHOR

...view details