ನವದೆಹಲಿ:ಸ್ವಿಸ್ ಬ್ಯಾಂಕ್ನಲ್ಲಿ ಅನೇಕ ಭಾರತೀಯರು ಕಪ್ಪು ಹಣವಿಟ್ಟಿದ್ದಾರೆಂಬ ಮಾಹಿತಿ ಈಗಾಗಲೇ ಗೊತ್ತಿರುವ ಸಂಗತಿ. ಅದನ್ನ ಭಾರತಕ್ಕೆ ವಾಪಸ್ ತರಲು ಈ ಹಿಂದಿನಿಂದಲೂ ಸಿದ್ಧತೆ ನಡೆಸಲಾಗಿದ್ದು, ಇದೀಗ ಅದಕ್ಕೆ ಮತ್ತಷ್ಟು ಬಲ ಸಿಕ್ಕಿದೆ.
ಸ್ವಿಸ್ ಬ್ಯಾಂಕ್ನಲ್ಲಿ ಹಣವಿಟ್ಟ 25 ಭಾರತೀಯರಿಗೆ ಸ್ವಿಜರ್ಲೆಂಡ್ ನೋಟಿಸ್! - ಸ್ವಿಜರ್ಲೆಂಡ್ ನೋಟಿಸ್
ಸ್ವೀಸ್ ಬ್ಯಾಂಕ್ನಲ್ಲಿ ಭಾರತೀಯರು ಠೇವಣಿ ಇಟ್ಟಿರುವ ಹಣದ ಮಾಹಿತಿ ನೀಡಲು ಇದೀಗ ಅಲ್ಲಿನ ಸರ್ಕಾರ ಮುಂದಾಗಿದ್ದು, ಏನಾದರೂ ತಕ್ಕರಾರು ಇದ್ದರೆ ಮೇಲ್ಮನವಿ ಸಲ್ಲಿಕೆ ಮಾಡುವಂತೆ ಭಾರತೀಯರಿಗೆ ತಿಳಿಸಿದೆ.
ನೋಟಿಸ್ ಜಾರಿಯಾಗಿರುವ ಎಲ್ಲ ಭಾರತೀಯರು ಸ್ವಿಸ್ ಬ್ಯಾಂಕ್ನಲ್ಲಿ ಹಣ ಠೇವಣಿ ಇಟ್ಟಿದ್ದು, ಇವರ ಮಾಹಿತಿಯನ್ನ ಭಾರತ ಸರ್ಕಾರಕ್ಕೆ ನೀಡಲಾಗುವುದು ಎಂದು ಇದರಲ್ಲಿ ತಿಳಿಸಲಾಗಿದೆ. ಒಂದು ವೇಳೆ ಮಾಹಿತಿ ಹಂಚಿಕೆ ಮಾಡಲು ತಮಗೆ ಇಷ್ಟವಿಲ್ಲದೇ ಹೋದರೆ, 30 ದಿನದೊಳಗೆ ಮೇಲ್ಮನವಿ ಸಲ್ಲಿಕೆ ಮಾಡಿ ಎಂದು ಸ್ವಿಜರ್ಲೆಂಡ್ ಸರ್ಕಾರ ತಿಳಿಸಿದೆ.
ಮೇ 21ರಂದು 11 ಭಾರತೀಯರಿಗೆ ನೋಟಿಸ್ ಜಾರಿಯಾಗಿದ್ದು, ಅದರಲ್ಲಿ ಇಬ್ಬರ ಹೆಸರು ಕೂಡ ಬಹಿರಂಗಗೊಂಡಿದೆ. ಕೃಷ್ಣ ಭಗವಾನ್ ರಾಮಚಂಚ್ ಮತ್ತು ಕಲ್ಪೇಶ್ ಹರ್ಷದ್ ಕಿನಾರಿವಾಲಾ ಆಗಿದ್ದಾರೆ. ಉಳಿದಂತೆ Mrs A S B K,Mr A B K I,Mrs P A S ಎಂದೆಲ್ಲ ಬರೆಯಲಾಗಿದೆ.