ಕೇಪ್ ಕೆನವೆರಲ್ ( ಅಮೆರಿಕ): ಮೊದಲ ಬಾರಿಗೆ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇದೀಗ ಮತ್ತೆ ಮಂಗಳನ ಅನ್ವೇಷಣೆಗೆ ಸಜ್ಜಾಗುತ್ತಿದೆ. ಈ ಬಾರಿ ನಾಸಾ ವಿಶೇಷ ಪರ್ಸೀವರೆನ್ಸ್ ಹೆಸರಿನ ರೋವರ್ ಅನ್ನು ಮಂಗಳನಲ್ಲಿಗೆ ಕಳುಹಿಸುತ್ತಿದೆ.
ಮತ್ತೆ ಮಂಗಳನ ಅನ್ವೇಷಣೆಗೆ ಮುಂದಾದ ನಾಸಾ - ಪರ್ಸೀವರೆನ್ಸ್ ಹೆಸರಿನ ರೋವರ್
ನಾಸಾ ವಿಶೇಷ ಪರ್ಸೀವರೆನ್ಸ್ ಹೆಸರಿನ ರೋವರ್ ಅನ್ನು ಫ್ಲೋರಿಡಾದ ಕೇಪ್ ಕೆನವೆರಲ್ ನಿಂದ ಮಂಗಳನಲ್ಲಿ ಕಳುಹಿಸುತ್ತಿದೆ. ಇದು ಮಂಗಳನ ಮೇಲ್ಮೈನಲ್ಲಿರುವ ಕಲ್ಲು ಮತ್ತು ಮಣ್ಣಿನ ಮಾದರಿಯ ಕುರಿತು ಅಧ್ಯಯನ ನಡೆಸಲಿದೆ.
Nasa
ಮಂಗಳ ಗ್ರಹದ ಕುರಿತು ಅಧ್ಯಯನ ನಡೆಸಲು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಹೋಪ್ ಆರ್ಬಿಟರ್ ಮತ್ತು ಚೀನಾದ ಕ್ವೆಸ್ಟ್ ಫಾರ್ ಹೆವನ್ಲಿ ಟ್ರುತ್ ಆರ್ಬಿಟರ್ ಕೂಡ ಉತ್ಸುಕವಾಗಿದೆ. ಅದರ ಜತೆಗೆ ನಾಸಾದ ರೋವರ್ ಕೂಡ ಈ ಬಗ್ಗೆ ಸಂಶೋಧನೆ ಕೈಗೊಳ್ಳಲಿದೆ.
ಈ ರೋವರ್ 300 ದಶಲಕ್ಷ ಮೈಲುಗಳಷ್ಟು ಪ್ರಯಾಣಿಸಿದ ನಂತರ ಬಾಹ್ಯಾಕಾಶ ನೌಕೆ ಮಂಗಳ ತಲುಪಲು ಏಳು ತಿಂಗಳು ತೆಗೆದುಕೊಳ್ಳುತ್ತದೆ. ಮಂಗಳನ ಮೇಲ್ಮೈನಲ್ಲಿರುವ ಕಲ್ಲು ಮತ್ತು ಮಣ್ಣಿನ ಮಾದರಿ ಅಂದರೆ ಅತ್ಯಂತ ಭರವಸೆಯ ಶಿಲಾ ಮಾದರಿಗಳನ್ನು ಸಂಗ್ರಹಿಸಿ ತರಲಿದೆ ಎಂದು ನಾಸಾ ಆಡಳಿತಾಧಿಕಾರಿ ಜಿಮ್ ಬ್ರಿಡೆನ್‌ಸ್ಟೈನ್ ತಿಳಿಸಿದ್ದಾರೆ.