ಕರ್ನಾಟಕ

karnataka

ETV Bharat / briefs

ಗಾಯಗೊಂಡ ರನ್​ಮಷಿನ್​! ವಿಶ್ವಕಪ್​ಗೂ ಮುನ್ನ ಭಾರತ ತಂಡಕ್ಕೆ ಆಘಾತ

ಕಳೆದ ಮೂರ್ನಾಲ್ಕು ವರ್ಷಗಳಿಂದ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ರನ್​ಗಳ ಶಿಖರ ಕಟ್ಟುತ್ತಿರುವ ಕೊಹ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದರು. ಆದರೆ, ನಿನ್ನೆ ಸೌತಂಪ್ಟನ್​ನಲ್ಲಿ ನೆಟ್​ನಲ್ಲಿ ಅಭ್ಯಾಸ ಮಾಡುವ ವೇಳೆ ಕೊಹ್ಲಿ ಕೈ ಬೆರಳಿಗೆ ಗಾಯವಾಗಿದ್ದು ತಂಡಕ್ಕೆ ತಲೆನೋವಾಗಿದೆ.

By

Published : Jun 2, 2019, 12:01 PM IST

kohli

ಭಾರತ: ಭಾರತ ತಂಡಕ್ಕೆ ಬ್ಯಾಟಿಂಗ್‌ ವಿಭಾಗದಲ್ಲಿ ಆಧಾರಸ್ತಂಭವಾಗಿರುವ ನಾಯಕ ವಿರಾಟ್​ ಕೊಹ್ಲಿ ನೆಟ್ಸ್‌ನಲ್ಲಿ ಗಾಯಗೊಂಡಿದ್ದು, ಕೋಟ್ಯಾಂತರ ಅಭಿಮಾನಿಗಳಿಗೆ ಅಘಾತವಾಗಿದೆ.

ಕಳೆದ ಕೆಲ ವರ್ಷಗಳಿಂದ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ರನ್​ ಶಿಖರವನ್ನು ಕಟ್ಟುತ್ತಿರುವ ಕೊಹ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದರು. ಆದರೆ,ನಿನ್ನೆ ಸೌತಂಪ್ಟನ್​ನಲ್ಲಿ ನೆಟ್​ನಲ್ಲಿ ಅಭ್ಯಾಸ ಮಾಡುವ ವೇಳೆ ಕೊಹ್ಲಿ ಕೈಬೆರಳಿಗೆ ಗಾಯ ಮಾಡಿಕೊಂಡಿರುವುದು ತಂಡಕ್ಕೆ ತಲೆನೋವು ತಂದಿದೆ.

ಭಾರತದ ಫಿಸಿಯೋಥೆರಪಿಸ್ಟ್​ ಪ್ಯಾಟ್ರಿಕ್ ಫರ್ಹಾರ್ಟ್, ಕೊಹ್ಲಿ ಗಾಯಗೊಂಡಿದ್ದ ವೇಳೆ ತುಂಬಾ ಸಮಯ ಅವರ ಬಳಿಯೇ ಇದ್ದು, ಮೊದಲು ಮ್ಯಾಜಿಕ್​ ಸ್ಪ್ರೇ ಮಾಡಿ, ನಂತರ ಗಾಯಕ್ಕೆ ಬ್ಯಾಂಡೈಡ್‌ ಟೇಪ್​ ಮಾಡಿದ್ದಾರೆ. ನಂತರ ಕೊಹ್ಲಿ ಅಭ್ಯಾಸ ಮಾಡದೆ ಐಸ್​ಪ್ಯಾಕ್​ನಿಂದ ಬೆರಳನ್ನು ಒತ್ತಿಹಿಡಿದು ಮೈದಾನದಿಂದ ಹೊರನಡೆದಿದ್ದಾರೆ.

ಜೂನ್​ 5 ರಂದು ದ.ಆಫ್ರಿಕಾ ವಿರುದ್ಧ ಭಾರತ ವಿಶ್ವಕಪ್​ ಅಭಿಯಾನ ಆರಂಭಿಸಲಿದ್ದು, ಕೊಹ್ಲಿ ಗಾಯದ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಟೂರ್ನಿಯಲ್ಲಿ ಟೀಂ​ ಇಂಡಿಯಾ ಒಟ್ಟು 9 ಪಂದ್ಯಗಳನ್ನು ಆಡಲಿದ್ದು, ಈ ಪಂದ್ಯದಿಂದ ಕೊಹ್ಲಿ ವಿಶ್ರಾಂತಿ ಪಡೆಯಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details