ಲಂಡನ್: ಅಧಿಕೃತವಾಗಿ ಪಂದ್ಯಾವಳಿಗಳು ನಡೆಯೋದಕ್ಕೂ ಮುನ್ನ ನಡೆದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಕಿವೀಸ್ ಬೌಲರ್‌ಗಳ ದಾಳಿಗೆ ಕಂಗೆಟ್ಟು ಕೇವಲ 179 ರನ್ಗಳಿಗೆ ಸರ್ವಪತನ ಕಂಡಿದೆ.
ಲಂಡನ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಕಿವೀಸ್ ಬೌಲರ್‌ಗಳ ದಾಳಿಗೆ ಕುಸಿದು 39.2 ಓವರ್ಗಳಲ್ಲಿ 179 ರನ್ಗಳಿಗೆ ಕುಸಿತ ಕಂಡಿತು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ 2, ಧವನ್ 2 ಹಾಗೂ ರಾಹುಲ್ 6 ರನ್ ಗಳಿಸಿ ಟ್ರೆಂಟ್ ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಆಟ 18ಕ್ಕೆ ಸೀಮಿತವಾದರೆ, ಹಾರ್ದಿಕ್ 30 ರನ್ ಗಳಿಸಿ ತಂಡವನ್ನು ದಿಢೀರ್ ಕುಸಿತದಿಂದ ಪಾರು ಮಾಡಿದರು. ನಂತರ ಬಂದ ಕಾರ್ತಿಕ್ 4 ರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಧೋನಿ 17 , ಜಡೇಜಾ 54 , ಕುಲ್ದೀಪ್ ಯಾದವ್ 19 ರನ್ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು.