ಕರ್ನಾಟಕ

karnataka

ETV Bharat / briefs

ದೀದಿಗೆ ಬಿಜೆಪಿ ಬಿಗ್​ ಶಾಕ್​​​...  ಇದು 1ನೇ ಹಂತ ಕಾದು ನೋಡಿ ಎಂದ ಕಮಲ ನಾಯಕರು! - ಕೈಲಾಶ್ ವಿಜಯ್​​ವರ್ಗಿಯ

ಲೋಕಸಭಾ ಚುನಾವಣೆ ಏಳು ಹಂತದಲ್ಲಿ ನಡೆದಿದ್ದು, ಬಿಜೆಪಿ ಸೇರ್ಪಡೆ ಸಹ ಏಳು ಹಂತದಲ್ಲಿ ನಡೆಯಲಿದೆ. ಇಂದು ಜರುಗಿದ್ದು ಮೊದಲ ಹಂತ ಎಂದು ಕೈಲಾಶ್ ವಿಜಯ್​ವರ್ಗಿಯಾ ವ್ಯಂಗ್ಯವಾಡಿದ್ದಾರೆ

ದೀದಿ ಪಕ್ಷ

By

Published : May 28, 2019, 5:00 PM IST

ಕೋಲ್ಕತ್ತಾ:ಪಶ್ಚಿಮ ಬಂಗಾಳ ರಾಜಕೀಯ ಮನ್ವಂತರಕ್ಕೆ ಕಾರಣವಾಗಿದ್ದು ತೃಣಮೂಲ ಕಾಂಗ್ರೆಸ್​​​ನ ಇಬ್ಬರು ಹಾಗೂ ಸಿಪಿಎಂನ ಒಬ್ಬ ಶಾಸಕ ಬಿಜೆಪಿ ಸೇರಿದ್ದಾರೆ.

ಪ್ರಸ್ತುತ ಮೂವರು ಶಾಸಕರು ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಕೆಲ ದಿನಗಳಲ್ಲಿ 50ಕ್ಕೂ ಅಧಿಕ ಕೌನ್ಸಿಲರ್​​ಗಳು ಸಹ ಬಿಜೆಪಿಗೆ ಸೇರ್ಪಡೆಯಾದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್​​ವರ್ಗಿಯಾ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಏಳು ಹಂತದಲ್ಲಿ ನಡೆದಿದ್ದು, ಬಿಜೆಪಿ ಸೇರ್ಪಡೆ ಸಹ ಏಳು ಹಂತದಲ್ಲಿ ನಡೆಯಲಿದೆ. ಇಂದು ಜರುಗಿದ್ದು ಮೊದಲ ಹಂತ ಎಂದು ಕೈಲಾಶ್ ವಿಜಯ್​ವರ್ಗಿಯ ವ್ಯಂಗ್ಯವಾಡಿದ್ದಾರೆ.

ಇಂದು ಪಕ್ಷ ಸೇರಿರುವ ಟಿಎಂಸಿ ಹಾಗೂ ಸಿಪಿಎಂ ಶಾಸಕರನ್ನು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್​​ವರ್ಗಿಯಾ ಬರಮಾಡಿಕೊಂಡರು.

ABOUT THE AUTHOR

...view details