ನವದೆಹಲಿ:ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಷ್ಟ್ರ ರಾಜಧಾನಿ ಮಹತ್ವದ ಸಮಾರಂಭಕ್ಕೆ ಸಜ್ಜಾಗಿ ನಿಂತಿದೆ.
ಕಳೆದ ಮೂರು ದಶಕದ ಸಂಸತ್ ಇತಿಹಾಸದಲ್ಲಿ ಪ್ರತಿಪಕ್ಷಗಳಿಂದ ಗಟ್ಟಿ ಧ್ವನಿಯೊಂದು ಇದ್ದೇ ಇರುತ್ತಿತ್ತು. ಆಡಳಿತ ಪಕ್ಷದಲ್ಲೂ ಮುತ್ಸದ್ಧಿ ರಾಜಕಾರಣಿಗಳಿರುತ್ತಿದ್ದರು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಈ ಬಾರಿಯ ಸಂಸತ್ ಈ ವಿಚಾರಗಳಿಗೆ ಭಿನ್ನ ಎನಿಸಿದೆ.
ಬಿಜೆಪಿಯ ಹಿರಿಯ ರಾಜಕಾರಣಿ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್, ಹುಕುಮ್ ದೇವ್ ನಾರಾಯಣ್ ಯಾದವ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಮುಂಬರುವ ಸಂಸತ್ ಕಲಾಪವನ್ನು ತಪ್ಪಿಸಿಕೊಂಡ ಪ್ರಮುಖರಾಗಿದ್ದಾರೆ.
ಆರ್ಎಸ್ಎಸ್ ಕಟ್ಟಾಳು, ಸೈಕಲ್ನಲ್ಲೇ ಓಡಾಟ... ಸಂಸತ್ ಪ್ರವೇಶಿಸಿದ ಸರಳತೆಯ ಸಾಕಾರಮೂರ್ತಿ...!
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್, ಕಾಲ್ರಾಜ್ ಮಿಶ್ರಾ, ಭಗತ್ ಸಿಂಗ್ ಕೊಶಿಯಾರಿ, ಶಾಂತ ಕುಮಾರ್ ಕಣಕ್ಕಿಳಿದಿರಲಿಲ್ಲ. ಹೆಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ತಮ್ಮ ಕ್ಷೇತ್ರದಲ್ಲಿ ಸೋಲನುಭವಿಸಿ ಸಂಸತ್ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
ಕಾಂಗ್ರೆಸ್ ನಾಯಕ ತಾರಿಖ್ ಅನ್ವರ್, ಶಿವಸೇನಾ ಹಿರಿಯ ನಾಯಕ ಅನಂತ್ ಗೀತೆ, ಸಿಪಿಐಎಂನ ಪ್ರಭಾವಿ ರಾಜಕಾರಣಿ ಮೊಹಮ್ಮದ್ ಸಲೀಮ್ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳವಲ್ಲಿ ವಿಫಲರಾಗಿದ್ದಾರೆ.
ಬಹುದೊಡ್ಡ ರಾಜತಾಂತ್ರಿಕ ಮುನ್ನಡೆ... ಮಾಲ್ಡೀವ್ಸ್ ಸಂಸತ್ನಲ್ಲಿ ನಮೋ ಭಾಷಣ..!
542 ಸಂಸದರ ಪೈಕಿ 300 ಮಂದಿ ಚೊಚ್ಚಲ ಬಾರಿಗೆ ಸಂಸತ್ ಪ್ರವೇಶ ಮಾಡುತ್ತಿದ್ದಾರೆ. ಜೊತೆಗೆ ಹಲವು ಹಿರಿಯ ನಾಯಕರನ್ನು ಮತದಾರ ತಿರಸ್ಕರಿಸಿದ್ದಾನೆ. ಈ ಬಾರಿಯ ಜನಾದೇಶದಲ್ಲಿ ಒಂದು ಪೀಳಿಗೆಯ ಅಂತ್ಯವಾಗಿದ್ದು ಹೊಸಮುಖಗಳಿಗೆ ಮತದಾರ ಪ್ರಭು ಮಣೆ ಹಾಕಿದ್ದಾನೆ.